×
Home About Us Advertise With s Contact Us

ದೆಹಲಿಯಲ್ಲಿ ಭಾರತ, ಚೀನಾ ಗಡಿ ಮಾತುಕತೆ

borderಬೀಜಿಂಗ್: ಚೀನಾ ಮತ್ತು ಭಾರತ ಸೋಮವಾರ ನವದೆಹಲಿಯಲ್ಲಿ ಗಡಿ ಮಾತುಕತೆ ನಡೆಸುತ್ತಿವೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಉಭಯ ದೇಶಗಳ ನಡುವೆ ದೆಹಲಿಯಲ್ಲಿ ನಡೆಯುತ್ತಿರುವ ಮೊದಲ ಮಾತುಕತೆ ಇದಾಗಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾದ ರಾಷ್ಟ್ರೀಯ ಭದ್ರತಾ ಸಹೆಗಾರ ಮತ್ತು ಸ್ಟೇಟ್ ಕೌನ್ಸಿಲರ್ ಯಾಂಗ್ ಜೀಚಿ ಸೇರಿದಂತೆ ಮತ್ತಿತರ ಅಧಿಕಾರಿಗಳೊಂದಿಗೆ ಹೈದರಾಬಾದ್ ಹೌಸ್‌ನಲ್ಲಿ ಸಭೆ ನಡೆಸುತ್ತಿದ್ದಾರೆ.

ಎರಡು ದೇಶಗಳ ಬಲಿಷ್ಠ ನಾಯಕತ್ವದಡಿಯಲ್ಲಿ ಗಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುತ್ತಿದೆ.

ಲಡಾಖ್‌ನ ಚುಮುರ್ ಪ್ರದೇಶಕ್ಕೆ ಚೀನಿ ಪಡೆಗಳು ಪದೇ ಪದೇ ಅತಿಕ್ರಮಣ ಪ್ರವೇಶ ಮಾಡುತ್ತಿರುವ ಬಗ್ಗೆ ಭಾರತ ಪ್ರಸ್ತಾಪಿಸುವ ಸಾಧ್ಯತೆ ಇದೆ.

 

 

 

 

 

 

 

 

Recent News

Back To Top
error: Content is protected !!