Tuesday, 20th February 2018
×
Home About Us Advertise With s Contact Us

ಟ್ಯಾಂಕರ್ ಢಿಕ್ಕಿ ಭಾವಿ ವಧು ಸಾವು

Bantwala NEWSಬಂಟ್ವಾಳ : ಬಿ.ಸಿ.ರೋಡಿನ ವೃತ್ತ ಬಳಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾವಿ ವಧುವೊಬ್ಬಳು ಮೃತ ಪಟ್ಟಿದ್ದಾಳೆ.ಕಾಸರಗೋಡ್ ಪೆರ್ಲ ನಿವಾಸಿಯಾಗಿರುವ ಉಮೇಶ್ ರೈ ಎಂಬವರ ಪುತ್ರಿ ದೀಪ್ತಿ ರೈ 24 ಮೃತಪಟ್ಟ ದುರ್ದೈವಿ. ಈಕೆ ತನ್ನ ಭಾವಿ ಪತಿ ಕಾಸರಗೋಡ್ ಮೂಲದ ವಿನೋದ್ ಎಂಬವರ ಬೈಕಿನಲ್ಲಿ ಪೆರ್ಲದಿಂದ ವಿಟ್ಲ ಬಿ.ಸಿ.ರೋಡ್ ರಸ್ತೆಯಾಗಿ ಮಂಗಳೂರಿಗೆ ತೆರಳುತ್ತಿದ್ದರು.

ದೀಪ್ತಿಯ ತಂದೆ ಮಂಗಳೂರಿನ ರೈ ಎಸ್ಟೇಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇವರನ್ನು ಭೇಟಿಯಾಗಲು ಇವರಿಬ್ಬರು ಬೈಕಿನಲ್ಲಿ ತೆರಳುತ್ತಿದ್ದರೆನ್ನಲಾಗಿದೆ. ಬ.ಸಿ.ರೋಡ್ ವೃತ್ತ ಬಳಿ ಹಿಂದಿನಿಂದ ಧಾವಿಸಿ ಬಂದ ಟ್ಯಾಂಕರೊಂದು ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಬೈಕಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ರಸ್ತೆಗೆ ಬಿದ್ದ ದೀಪ್ತಿ ಗಂಭೀರ ಸ್ವರೂಪದ ಗಾಯಗೊಂಡಿದ್ದು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರು ದಾರಿ ಮಧ್ಯೆ ಸಾವನ್ನಪ್ಪಿದ್ದಾಳೆ. ಸವಾರ ವಿನೋದ್ ಅಪಾಯದಿಂದ ಪಾರಾಗಿದ್ದಾರೆ.ಈ ಬಗ್ಗೆ ಬಂಟ್ವಾಳ ನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top