ಅಹ್ಮದಾಬಾದ್: ನವರಾತ್ರಿಗೆ ದಿನಗಣನೆ ಆರಂಭವಾಗಿದೆ. ದಸರಾ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು ಇಡೀ ಭಾರತ ಸಜ್ಜಾಗಿದೆ. ಗುಜರಾತಿನಲ್ಲಂತೂ ಗರ್ಭಾನೃತ್ಯ ಮಾಡಲು ಮಹಿಳೆಯರು, ಯುವತಿಯರು ತುದಿಗಾಲಲ್ಲಿ ನಿಂತಿದ್ದಾರೆ.
ಪ್ರತಿಸಲವೂ ಗರ್ಭಿಣಿಯರು ಮತ್ತು ಹೊಸ ತಾಯಂದಿರು ಗರ್ಭಾ ನೃತ್ಯವನ್ನು ಮಿಸ್ ಮಾಡಿಕೊಳ್ಳುತ್ತಾರೆ. ಆದರೆ ಈ ಬಾರಿ ಹಾಗಾಗುವುದಿಲ್ಲ. ಏಕೆಂದರೆ ಅಹ್ಮದಾಬಾದ್ನ ರಿತ ಸಿಂಗ್ ಎಂಬ ಉದ್ಯಮಿಯೊಬ್ಬರು ಗರ್ಭಿಣಿ ಮತ್ತು ನೂತನ ತಾಯಂದಿರಿಗಾಗಿಯೇ ವಿಶೇಷವಾಗಿ ಗರ್ಭಾ ನೃತ್ಯವನ್ನು ಏರ್ಪಡಿಸಿದ್ದಾರೆ. ಇದರಲ್ಲಿ ಅವರ ಕುಟುಂಬ ಸದಸ್ಯರೂ ಪಾಲ್ಗೊಳ್ಳಬಹುದು.
ಸಾಮಾನ್ಯವಾಗಿ ಗರ್ಭಿಣಿ ಮತ್ತು ಬಾಣಂತಿಯರನ್ನು ಆರೋಗ್ಯದ ಕಾರಣಕ್ಕಾಗಿ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಹಿರಿಯರು ಬಿಡುವುದಿಲ್ಲ. ಗರ್ಭಾ ನೃತ್ಯದಲ್ಲಿ ಪರಸ್ಪರ ಬಣ್ಣದ ನೀರು ಎರೆಚಾಟ, ಕುಂಕುಮ ಎರೆಚಾಟ ಇರುವುದರಿಂದ ಇದು ಅಪಾಯಕಾರಿಯಾಗಿರುತ್ತದೆ. ಆದರೆ ರಿತ ಸಿಂಗ್ ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ವಿಭಿನ್ನವಾಗಿ ಗರ್ಭಾನೃತ್ಯ ಆಯೋಜಿಸಿದ್ದಾರೆ.
ಈ ಗರ್ಭಿಣಿ, ಬಾಣಂತಿಯರು ಹಿಂದೆ ಗರ್ಭಾ ಆಚರಿಸಿರಬಹುದು ಆದರೆ ತಮ್ಮ ಜೀವನ ವಿಶೇಷ ವೇಳೆಯಲ್ಲಿ ಅವರು ಇದನ್ನು ಕಳೆದುಕೊಳ್ಳುವುದು ಬೇಡ ಎಂದು ರಿತು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.