ನವದೆಹಲಿ: ಭಾರತ ಮತ್ತು ಯುಎಸ್ ನಡುವೆ ಸೆ.6 ರಂದು ಮೊಟ್ಟಮೊದಲ 2+2 ಮಾತುಕತೆ ಜರುಗಲಿದೆ ಎಂದು ಅಮೇರಿಕದ ಆಡಳಿತ ಮೂಲಗಳು ಸ್ಪಷ್ಟಪಡಿಸಿವೆ.
ನವದೆಹಲಿಯಲ್ಲಿ ಸೆ.6 ರಂದು ಭಾರತ ಹಾಗೂ ಯುಎಸ್ನ 2+2 ಮಾತುಕತೆಗೆ ಆರಂಭ ಸಿಗಲಿದೆ ಎಂದು ಘೋಷಿಸಲು ಸಂತೋಷಪಡುತ್ತೇವೆ ಎಂದು ಶುಕ್ರವಾರ ಯುಎಸ್ ಆಡಳಿತ ವಕ್ತಾರ ಹೀದರ್ ನೌರೆಟ್ ಹೇಳಿದ್ದಾರೆ.
ಕಳೆದ ವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತ ಯುಎಸ್ ನಡುವಣ 2+2 ಮಾತುಕತೆ ಸೆಪ್ಟಂಬರ್ ತಿಂಗಳಿನಲ್ಲಿ ನಡೆಯಲಿದೆ ಎಂದು ಹೇಳಿದ್ದರು. ಅಭಿವೃದ್ಧಿ ಮತ್ತು ತಂತ್ರಗಾರಿಕಾ ರಕ್ಷಣಾ ಸಹಕಾರದ ಬಲವರ್ಧನೆ ಮಾಡುವ ಆಶಯದೊಂದಿಗೆ ಈ ರಚನಾತ್ಮಕ ಮಾತುಕತೆಯನ್ನು ನಡೆಸಲು ಉಭಯ ರಾಷ್ಟ್ರಗಳು ನಿರ್ಧರಿಸಿವೆ.
2017ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯುಎಸ್ ಪ್ರವಾಸ ಹಮ್ಮಿಕೊಂಡಿದ್ದ ವೇಳೆ ಉಭಯ ದೇಶಗಳು ತಂತ್ರಗಾರಿಕಾ ಮಟ್ಟದ 2+2 ಮಾತುಕತೆಯನ್ನು ನಡೆಸುವ ಬಗ್ಗೆ ನಿರ್ಣಯವನ್ನು ಕೈಗೊಂಡಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.