ವಾಷಿಂಗ್ಟನ್: ಮಹಾತ್ಮ ಗಾಂಧೀಜಿಯವರ ಸಹಿಯುಳ್ಳ 1924ರ ಪೋಸ್ಟ್ಕಾರ್ಡ್ವೊಂದು ಅಮೆರಿಕಾದಲ್ಲಿ 20,233 ಡಾಲರ್ಗೆ ಹರಾಜಾಗಿದೆ.
ಈ ಅಂಚೆ ಪತ್ರದ ಎರಡೂ ಬದಿಗಳಲ್ಲೂ ಬರಹವಿದ್ದು, ‘ಎಂ.ಕೆ ಗಾಂಧೀ’ ಸಹಿ ಇದೆ. 1924ರ ನವೆಂಬರ್ 30ರಂದು ಐರಿಶ್ ಮೂಲದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ್ತಿ ಅನಿಬೆಸೆಂಟ್ ಅವರಿಗೆ ಈ ಪತ್ರವನ್ನು ಬರೆಯಲಾಗಿದೆ.
ಜೂನ್ 13ರಂದು ಈ ಪತ್ರದ ಹರಾಜು ಪ್ರಕ್ರಿಯೆ ಜರುಗಿತ್ತು.
‘ನಿಮ್ಮ ಪತ್ರಕ್ಕೆ ಧನ್ಯವಾದಗಳು. ಇಂದು ರಾತ್ರಿ ನನ್ನ ಮಗ ದೇವದಾಸ್ ಹೊರಡುತ್ತಾನೆ, ಆತನ ಖರ್ಚುಗಳ ಬಗ್ಗೆ ಚಿಂತೆಯಾಗದಿರಲಿ ಎಂದು ಬೇಡುತ್ತೇನೆ. ಆತ ನಿಮ್ಮ ಅತಿಥಿಯಾಗಲು ಹೆಮ್ಮೆಪಡುತ್ತಾನೆ. ನೀವು ಕೊಟ್ಟು ಕಳುಹಿಸಿದ ಖಾದರ್ ಟವೆಲ್ನ್ನು ಜಮ್ನಾದಾಸ್ ನನಗೆ ನೀಡಿದ್ದಾರೆ. ಆ ಉಡುಗೊರೆಯನ್ನು ಕಾಪಾಡುತ್ತೇನೆ, ನೇಯುವುದು ಅದ್ಭುತವಾದ ಕಾರ್ಯ’ ಎಂದು ಪತ್ರದಲ್ಲಿ ಗಾಂಧೀಜಿ ಬರೆದಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.