ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಒರಿಸ್ಸಾ ಮತ್ತು ಮಿಜೋರಾಂ ರಾಜ್ಯಗಳಿಗೆ ಶುಕ್ರವಾರ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ.
ಒರಿಸ್ಸಾದ ರಾಜ್ಯಪಾಲರಾಗಿ ಪ್ರೊಫೆಸರ್ ಗಣೇಶ್ ಲಾಲ್ ಅವರು ನೇಮಕಗೊಂಡಿದ್ದು, ಇಂದಿನಿಂದಲೇ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಮಿಜೋರಾಂ ರಾಜ್ಯಪಾಲರಾಗಿ ಕುಮ್ಮಾನಮ್ ರಾಜಶೇಖರನ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ಇಲ್ಲಿನ ರಾಜ್ಯಪಾಲರಾಗಿರುವ ಲೆ.ಜನರಲ್ ಜೆನ್ ನಿರ್ಭಯ್ ಶರ್ಮಾ ಅವರ ಅಧಿಕಾರವಧಿ ಮೇ.28ಕ್ಕೆ ಪೂರ್ಣಗೊಳ್ಳಲಿದೆ.
ರಾಜಶೇಖರನ್ ಪ್ರಸ್ತುತ ಕೇರಳ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.