ದುಬೈ: ಪಾಕಿಸ್ಥಾನ ಮತ್ತು ಅದರ ಜನರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಷ್ಟೊಂದು ಗೌರವವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಇದಕ್ಕಾಗಿಯೇ ಕೆಲ ಪಾಕಿಸ್ಥಾನಿಯರು ಹೊರದೇಶಗಳಲ್ಲಿ ತಮ್ಮನ್ನು ತಾವು ಭಾರತೀಯರು ಎಂದೇ ಪರಿಚಯಿಸಿಕೊಳ್ಳುತ್ತಾರೆ. ಜನರ ಅನಗತ್ಯ ಸಂಶಯಗಳಿಂದ ಪಾರಾಗಬಹುದು ಎಂಬ ಯೋಜನೆ ಅವರದ್ದಾಗಿರುತ್ತದೆ.
ಇಸ್ಲಾಮಿಕ್ ದೇಶಗಳಲ್ಲಿ ನಮಗೆ ಹೆಚ್ಚು ಮರ್ಯಾದೆ ಇದೆ ಎಂದು ಪಾಕಿಸ್ಥಾನಿಯರು ಭಾವಿಸಿದ್ದಾರೆ. ಆದರೆ ಅದು ನಿಜವಲ್ಲ. ಅಲ್ಲೂ ಭಾರತದಷ್ಟು ಗೌರವ ಅವರಿಗಿಲ್ಲ ಎಂಬುದು ಮತ್ತೊಮ್ಮೆ ದೃಢಪಟ್ಟಿದೆ.
ದುಬೈನ ಜನರಲ್ ಸೆಕ್ಯೂರಿಟಿ ಮುಖ್ಯಸ್ಥ ಧಹಿ ಖಲ್ಪಾನ್ ಅವರು, ಪಾಕಿಸ್ಥಾನಿಕರು ಗಲ್ಫ್ ಭದ್ರತೆಗೆ ದೊಡ್ಡ ಬೆದರಿಕೆಯಾಗಿದ್ದಾರೆ. ಅವರು ಡ್ರಗ್ನ್ನು ಇಲ್ಲಿಗೆ ತರುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ಅಲ್ಲಿನ ಪೊಲೀಸರು ಡ್ರಗ್ ಸ್ಮಗ್ಲಿಂಗ್ನಲ್ಲಿ ತೊಡಗಿದ್ದ ಪಾಕಿಸ್ಥಾನಿ ಗ್ಯಾಂಗ್ನ್ನು ಹಿಡಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ಪಾಕಿಸ್ಥಾನಿಯರನ್ನು ಕೆಲಸಕ್ಕಿಡದಂತೆ ಕಂಪನಿಗಳಿಗೆ ಸಲಹೆ ನೀಡಿದ್ದಾರೆ.
ಅಷ್ಟೇ ಅಲ್ಲದೇ, ಭಾರತೀಯರು ಶಿಸ್ತುಬದ್ಧರಾಗಿದ್ದಾರೆ ಆದರೆ ಪಾಕಿಸ್ಥಾನಿಯರು ಅಪರಾಧ, ಕಳ್ಳಸಾಗಾಣೆಯಲ್ಲಿ ತೊಡಗಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.