Date : Wednesday, 22-07-2015
ನವದೆಹಲಿ: ಕೃಷಿ ವಲಯದಲ್ಲಿ ಮಹತ್ವದ ಸಂಶೋಧನೆಗಳನ್ನು ನಡೆಸಲು ಉತ್ತೇಜನ ನೀಡುವ ಸಲುವಾಗಿ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್(ಐಸಿಎಆರ್)ನ ಸಂಸ್ಥಾಪನ ದಿನವಾದ ಜುಲೈ 25ರಂದು ಪ್ರಧಾನಿ ನರೇಂದ್ರ ಮೋದಿ ಮಹತ್ವದ ನಾಲ್ಕು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಫಾರ್‌ಮರ್ ಫಸ್ಟ್(ರೈತ ಮೊದಲು), ಸ್ಟುಡೆಂಟ್...
Date : Wednesday, 22-07-2015
ಶ್ರೀನಗರ: ಇಸಿಸ್‌ನಂತಹ ಭಯಾನಕ ಉಗ್ರ ಸಂಘಟನೆಯೊಂದರ ಬಾವುಟವನ್ನು ಸುಟ್ಟು ಹಾಕಿದ್ದಕ್ಕೆ ಜಮ್ಮು ಕಾಶ್ಮೀರದ ರಜೌರಿ ನಗರ ಹೊತ್ತಿ ಹುರಿದಿದೆ. ಪೊಲೀಸರ ಮತ್ತು ದುಷ್ಕರ್ಮಿಗಳ ನಡುವೆ ಕಾಳಗವೇ ಏರ್ಪಟ್ಟಿದ್ದು, ಕರ್ಫ್ಯೂ ಹೇರಲಾಗಿದೆ. ಕಾಶ್ಮೀರದಲ್ಲಿ ಕೆಲ ದೇಶದ್ರೋಹಿಗಳು ಪದೇ ಪದೇ ಇಸಿಸ್ ಧ್ವಜವನ್ನು ಹಾರಿಸಿ...
Date : Wednesday, 22-07-2015
ಚೆನ್ನೈ: ತಮಿಳುನಾಡಿನಲ್ಲಿ ಐದು ಬಾರಿ ಮುಖ್ಯಮಂತ್ರಿಯಾಗಿ ರಾಜ್ಯಭಾರ ಮಾಡಿರುವ ಎಂ.ಕರುಣಾನಿಧಿಯವರಿಗೆ ಇದೀಗ ಮದ್ಯ ಸೇವನೆ ಒಂದು ಸಾಮಾಜಿಕ ಪಿಡುಗು, ಎಲ್ಲಾ ಸಮಸ್ಯೆಗಳಿಗೂ ಮೂಲ ಎಂಬುದು ಅರಿವಾಗಿದೆ. ಹೀಗಾಗಿ ಮುಂದಿನ ಬಾರಿ ಡಿಎಂಕೆ ಪಕ್ಷ ಅಧಿಕಾರಕ್ಕೆ ಬಂದರೆ ಮದ್ಯಕ್ಕೆ ನಿಷೇಧ ಹೇರುವ ಭರವಸೆಯನ್ನು...
Date : Wednesday, 22-07-2015
ನವದೆಹಲಿ: ಪ್ರತಿಪಕ್ಷಗಳೆಲ್ಲ ಒಂದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ವಾಗ್ ಪ್ರಹಾರ ನಡೆಸುತ್ತಿವೆ, ಅಲ್ಲದೇ ಅವರು ರಾಜೀನಾಮೆ ನೀಡಿದರೆ ಮಾತ್ರ ಸುಗಮ ಕಲಾಪಕ್ಕೆ ಅನುವು ಮಾಡಿಕೊಡುತ್ತೇವೆ ಎಂದು ಬೆದರಿಕೆ ಹಾಕಿವೆ. ಇದಕ್ಕೆ ಪ್ರತಿಯಾಗಿ ಸುಷ್ಮಾ ಕಾಂಗ್ರೆಸ್ ವಿರುದ್ಧ ಸಮರ ಸಾರಲು...
Date : Tuesday, 21-07-2015
ನವದೆಹಲಿ: ತನ್ನ ಮೇಲಿನ ಎಲ್ಲಾ ವಿವಾದಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಲು ತಾನು ಸಿದ್ಧವಿರುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ವಿವಾದದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಸಲು ನಾನು ಇಂದೇ ಸಿದ್ಧಳಿದ್ದೇನೆ. ರಾಜ್ಯಸಭೆಯಲ್ಲೂ...
Date : Tuesday, 21-07-2015
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಲಲಿತ್ ಮೋದಿ ವಿವಾದಕ್ಕೆ ಬಲಿಯಾಗಿದೆ. ಪ್ರತಿಪಕ್ಷಗಳು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ವ್ಯಾಪಂ ಹಗರಣದ ಸಂಬಂಧ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ರಾಜೀನಾಮೆ ನೀಡಬೇಕೆಂದು ಪಟ್ಟು...
Date : Tuesday, 21-07-2015
ತ್ರಿಶೂರ್: ಕೇರಳದ ಪ್ರಸಿದ್ಧ ಗುರುವಾಯೂರು ಕೃಷ್ಣ ದೇಗುಲಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ದೇಗುಲದ ಸುತ್ತಮುತ್ತ ಹೈಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಗುರುವಾಯೂರು ದೇಗುಲದಲ್ಲಿ ಬಾಂಬ್ ಸ್ಫೋಟ ನಡೆಸುವುದಾಗಿ ಮಂಗಳವಾರ ಬೆಳಿಗ್ಗೆ ದೂರವಾಣಿ ಕರೆ ಬಂದಿದೆ, ಮಧ್ಯಪ್ರಾಚ್ಯ ದೇಶದಿಂದ ಈ ಕರೆ...
Date : Tuesday, 21-07-2015
ಮುಂಬಯಿ: ವಿಶ್ವ ಟ್ವೆಂಟಿ20-2016 ಅನ್ನು ಈ ಬಾರಿ ಭಾರತ ಆಯೋಜನೆ ಮಾಡಲಿದ್ದು, ದಿನಾಂಕ ಮತ್ತು ಸ್ಥಳವನ್ನು ಬಿಸಿಸಿಐ ಮಂಗಳವಾರ ಘೋಷಣೆ ಮಾಡಿದೆ. ಮಾರ್ಚ್ 11ರಿಂದ ಎಪ್ರಿಲ್ 3ರವರೆಗೆ ಪಂದ್ಯಾವಳಿಗಳು ನಡೆಯಲಿದೆ. ಬೆಂಗಳೂರು, ಚೆನ್ನೈ, ಧರ್ಮಶಾಲಾ, ಕೋಲ್ಕತ್ತಾ, ಮೊಹಾಲಿ, ಮುಂಬಯಿ, ನಾಗ್ಪುರ, ನವದೆಹಲಿಗಳಲ್ಲಿ...
Date : Tuesday, 21-07-2015
ನವದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ ಯಾಕುಬ್ ಅಬ್ದುಲ್ ರಝಾಕ್ ಮೆಮೊನ್‌ನ ಕ್ಷಮಾದಾನ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಹೀಗಾಗೀ ಯಕೂಬ್ ನೇಣಿಗೇರುವುದು ಖಚಿತಗೊಂಡಿದೆ. ಈಗಾಗಲೇ ಜುಲೈ 30ರಂದು ಯಾಕುಬ್‌ನನ್ನು ನೇಣಿಗೇರಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ರಾಷ್ಟ್ರಪತಿಗಳು ಈತನ ಕ್ಷಮಾದಾನ...
Date : Tuesday, 21-07-2015
ಮುಂಬಯಿ: ಮುಂಬಯಿಯಲ್ಲಿ ಕಳೆದ ರಾತ್ರಿಯಿಂದ ಭಾರೀ ವರ್ಷಧಾರೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇಡೀ ನಗರವೇ ಜಲಾವೃತಗೊಂಡಿದ್ದು, ವಾಹನಗಳ ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ಪಶ್ಚಿಮ ಮತ್ತು ಮಧ್ಯ ರೈಲ್ವೇ ಸಂಪರ್ಕಗಳು ಕಡಿತಗೊಂಡ ಪರಿಣಾಮವಾಗಿ 20 ನಿಮಿಷಗಳ ಕಾಲ ಸ್ಥಳಿಯ ರೈಲುಗಳ ಓಡಾಟ...