ನವದೆಹಲಿ: ಕೃಷಿ ವಲಯದಲ್ಲಿ ಮಹತ್ವದ ಸಂಶೋಧನೆಗಳನ್ನು ನಡೆಸಲು ಉತ್ತೇಜನ ನೀಡುವ ಸಲುವಾಗಿ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್(ಐಸಿಎಆರ್)ನ ಸಂಸ್ಥಾಪನ ದಿನವಾದ ಜುಲೈ 25ರಂದು ಪ್ರಧಾನಿ ನರೇಂದ್ರ ಮೋದಿ ಮಹತ್ವದ ನಾಲ್ಕು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಫಾರ್ಮರ್ ಫಸ್ಟ್(ರೈತ ಮೊದಲು), ಸ್ಟುಡೆಂಟ್ ರೆಡಿ( ವಿದ್ಯಾರ್ಥಿ ತಯಾರು), ಎಆರ್ವೈಎ(ಆರ್ಯ) ಮೇರಾ ಗಾಂವ್ ಮೇರಾ ಗೌರವ್(ನನ್ನ ಗ್ರಾಮ ನನ್ನ ಗೌರವ) ಎಂಬ ನಾಲ್ಕು ಯೋಜನೆಗಳನ್ನು ಐಸಿಎಆರ್ ವತಿಯಿಂದ ಜಾರಿಗೆ ತರಲಾಗುತ್ತಿದೆ.
ಇದೇ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿಯಿಂದ ಹೊರಗೆ ಬಿಹಾರದಲ್ಲಿ ಐಸಿಎಆರ್ನ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತಿದೆ. ದೇಶದ ಮೊದಲ ಅಗ್ರಿಕಲ್ಚರ್ ರಿಸರ್ಚ್ ಆಂಡ್ ಎಜುಕೇಶನಲ್ ಇನ್ಸ್ಟಿಟ್ಯೂಟ್ 110 ವರ್ಷಗಳ ಹಿಂದೆ ಪಾಟ್ನಾದಲ್ಲಿ ಸ್ಥಾಪನೆಗೊಂಡಿತ್ತು.
ಈ ಬಾರಿ ನಡೆಯಲಿರುವ ಸಮಾರಂಭದಲ್ಲಿ ಮೋದಿ ಐಸಿಎಆರ್ ವಿಶನ್ 2050 ದಾಖಲೆಯನ್ನು ಬಿಡುಗಡೆ ಮಾಡಲಿದ್ದಾರೆ ಮತ್ತು ಮಣ್ಣು ಪರೀಕ್ಷೆ ನಡೆಸುವ ಯಂತ್ರವನ್ನು ಮೂವರು ಯುವಕ ಕೃಷಿ ಉದ್ಯಮಿಗಳಿಗೆ ನೀಡಲಿದ್ದಾರೆ. ಅಲ್ಲದೇ ವಿವಿಧ ಸಂಸ್ಥೆಗಳಿಗೆ, ಶಿಕ್ಷಕರಿಗೆ, ಕೃಷಿ ಪತ್ರಕರ್ತರಿಗೆ, ವಿಜ್ಞಾನಿಗಳಿಗೆ 82 ಐಸಿಎಆರ್ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.
ದೆಹಲಿಯಲ್ಲಿ ಪ್ರಧಾನ ಕೇಂದ್ರವನ್ನು ಹೊಂದಿರುವ ಐಸಿಎಆರ್ ರಾಷ್ಟ್ರೀಯ ಕೃಷಿಯ ಅತಿದೊಡ್ಡ ಸಾರ್ವಜನಿಕ ವಲಯವಾಗಿದ್ದು, ಇದರ ಅಧೀನದಲ್ಲಿ ಒಟ್ಟು 100 ಸಂಸ್ಥೆಗಳಿವೆ, ಇದರಲ್ಲಿ ನಾಲ್ಕು ಡೀಮ್ಡ್ ವಿಶ್ವವಿದ್ಯಾನಿಲಯಗಳೂ ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.