News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 2nd September 2026

×
Home About Us Advertise With s Contact Us

2005-22ರ ನಡುವೆ ಜಾಗತಿಕ ವಾಣಿಜ್ಯ ಸೇವೆಗಳ ರಫ್ತಿನ ಪಾಲನ್ನು ದುಪ್ಪಟ್ಟುಗೊಳಿಸಿದೆ ಭಾರತ

ನವದೆಹಲಿ: ವಿಶ್ವಬ್ಯಾಂಕ್ ಮತ್ತು ವಿಶ್ವ ವ್ಯಾಪಾರ ಸಂಸ್ಥೆ (WTO) ವರದಿಯ ಪ್ರಕಾರ, ಭಾರತವು ಜಾಗತಿಕ ವಾಣಿಜ್ಯ ಸೇವೆಗಳ ರಫ್ತಿನ ಪಾಲನ್ನು 2005 ರಲ್ಲಿ 2 ಪ್ರತಿಶತದಿಂದ 2022 ರಲ್ಲಿ 4.4 ಪ್ರತಿಶತಕ್ಕೆ ದ್ವಿಗುಣಗೊಳಿಸಿದೆ. ‘ಅಭಿವೃದ್ಧಿಗಾಗಿ ಸೇವೆಗಳಲ್ಲಿ ವ್ಯಾಪಾರ’ ಎಂಬ ಶೀರ್ಷಿಕೆಯ ವರದಿಯು...

Read More

ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳೊಂದಿಗೆ ಸಂವಾದ ನಡೆಸಿದ ರಾಷ್ಟ್ರಪತಿ

ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ನಿನ್ನೆ ಬೆಂಗಳೂರಿನ ರಾಜಭವನದಲ್ಲಿ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳೊಂದಿಗೆ ಸಂವಾದ ನಡೆಸಿದರು. ಕರ್ನಾಟಕದ ಜೇನು ಕುರುಬ ಮತ್ತು ಕೊರಗ ಬುಡಕಟ್ಟು ಸಮುದಾಯಗಳನ್ನು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳು (PVTGs) ಎಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ರಾಜ್ಯಪಾಲ...

Read More

ಭಾರತ ಇಲ್ಲಿಯವರೆಗೆ 6G ತಂತ್ರಜ್ಞಾನಕ್ಕಾಗಿ 200 ಪೇಟೆಂಟ್‌ ಪಡೆದುಕೊಂಡಿದೆ: ವೈಷ್ಣವ್

ನವದೆಹಲಿ: ಭಾರತವು ಇಲ್ಲಿಯವರೆಗೆ 6G ತಂತ್ರಜ್ಞಾನಕ್ಕಾಗಿ 200 ಪೇಟೆಂಟ್‌ಗಳನ್ನು ಪಡೆದುಕೊಂಡಿದೆ. ನವದೆಹಲಿಯಲ್ಲಿ ನಡೆದ ಭಾರತ್ 6ಜಿ ಅಲಯನ್ಸ್ ಬಿಡುಗಡೆ ಸಮಾರಂಭದಲ್ಲಿ ಸಂವಹನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಮಾಹಿತಿ ನೀಡಿದ್ದಾರೆ. ಭಾರತ್ 6G ಅಲಯನ್ಸ್ ಉದ್ಯಮ, ಶೈಕ್ಷಣಿಕ...

Read More

ಸಚಿವ ಮಂಡಳಿ ಜೊತೆ ಮೋದಿ ಸಭೆ: ಮಹತ್ವದ ವಿಷಯಗಳ ಬಗ್ಗೆ ಚರ್ಚೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ  ಸಚಿವ ಮಂಡಳಿ ಸಭೆ ನಡೆದಿದೆ. ಸೋಮವಾರ ಸಂಜೆ ರಾಷ್ಟ್ರ ರಾಜಧಾನಿಯ ಪ್ರಗತಿ ಮೈದಾನದಲ್ಲಿ ಹೊಸದಾಗಿ ನಿರ್ಮಿಸಲಾದ ಸಮಾವೇಶ ಕೇಂದ್ರದಲ್ಲಿ ಸಭೆ ನಡೆಯಿತು. ಟ್ವೀಟ್‌ನಲ್ಲಿ ಮೋದಿ ಅವರು ವೈವಿಧ್ಯಮಯ ನೀತಿ-ಸಂಬಂಧಿತ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ...

Read More

ಮಹಾರಾಷ್ಟ್ರ ಮೂಲದ ISIS ಮಾಡ್ಯೂಲ್ ಭೇದಿಸಿದ ಎನ್‌ಐಎ

ನವದೆಹಲಿ: ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಹಾರಾಷ್ಟ್ರ ಮೂಲದ ISIS ಮಾಡ್ಯೂಲ್ ಅನ್ನು ಭೇದಿಸಿದ್ದು, ISIS ನ ಇಚ್ಛೆಯ ಮೇರೆಗೆ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಿದ ನಾಲ್ವರು ಆರೋಪಿಗಳನ್ನು ಬಂಧಿಸಿದೆ. ಎನ್‌ಐಎ ಪ್ರಕಾರ, ಮುಂಬೈ, ಥಾಣೆ ಮತ್ತು ಪುಣೆಯಲ್ಲಿ ಎನ್‌ಐಎ ನಡೆಸಿದ ವ್ಯಾಪಕ...

Read More

ಸ್ಯಾನ್ ಫ್ರಾನ್ಸಿಸ್ಕೋ ಭಾರತೀಯ ದೂತಾವಾಸಕ್ಕೆ ಬೆಂಕಿ ಹಚ್ಚಲು ಖಲಿಸ್ತಾನಿಗಳ ಪ್ರಯತ್ನ: ಯುಎಸ್‌ ಖಂಡನೆ

ನವದೆಹಲಿ:  ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ದೂತಾವಾಸಕ್ಕೆ ಬೆಂಕಿ ಹಚ್ಚುವ ಪ್ರಯತ್ನವನ್ನು ಖಲಿಸ್ಥಾನಿ ಮಾಡಿದ್ದು ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಘಟನೆಯನ್ನು ಅಮೆರಿಕಾ ಬಲವಾಗಿ ಖಂಡಿಸಿದೆ. ಹಿಂಸಾಚಾರವನ್ನು “ಕ್ರಿಮಿನಲ್ ಅಪರಾಧ” ಎಂದು ಕರೆದಿದೆ. ಟ್ವಿಟರ್‌ನಲ್ಲಿ ಜುಲೈ 2ರಂದು ಪೋಸ್ಟ್ ಮಾಡಿದ ಖಲಿಸ್ತಾನ್ ಬೆಂಬಲಿಗರ ವೀಡಿಯೊ...

Read More

ಜೂನ್ ತಿಂಗಳಲ್ಲಿ ಸಂಗ್ರಹವಾದ ಒಟ್ಟು ಜಿಎಸ್‌ಟಿ ರೂ 1,61,497 ಕೋಟಿ

ನವದೆಹಲಿ: ಜೂನ್ ತಿಂಗಳಲ್ಲಿ ಸಂಗ್ರಹವಾದ ಒಟ್ಟು ಜಿಎಸ್‌ಟಿ ರೂ 1,61,497 ಕೋಟಿ. ಇದರಲ್ಲಿ CGST ರೂ. 31,013 ಕೋಟಿ, SGST ರೂ.38,292 ಕೋಟಿ, IGST ರೂ. 80,292 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ರೂ. 39,035 ಕೋಟಿ ಸೇರಿದಂತೆ) ಮತ್ತು...

Read More

ರಾಜ್ಯಕ್ಕೆ ಆಗಮಿಸಿದ ದ್ರೌಪದಿ ಮುರ್ಮು ಅವರಿಗೆ ಸಿಎಂರಿಂದ ಸ್ವಾಗತ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಸೋಮವಾರ ಬೆಂಗಳೂರಿಗೆ ಆಗಮಿಸಿದ್ದು, ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ನೇರವಾಗಿ ಚಿಕ್ಕಬಳ್ಳಾಪುರಕ್ಕೆ ತೆರಳಿರುವ ರಾಷ್ಟ್ರಪತಿ ಮುರ್ಮು ಅವರು, ಮುದ್ದೇನಹಳ್ಳಿಯಲ್ಲಿ...

Read More

ರಾಜಕೀಯ ಪಕ್ಷಗಳ ಹಣಕಾಸು ಮಾಹಿತಿ ಸಲ್ಲಿಕೆಗೆ ಆನ್‌ಲೈಟ್‌ ಪೋರ್ಟಲ್‌ ಆರಂಭ

ನವದೆಹಲಿ: ರಾಜಕೀಯ ಪಕ್ಷಗಳಿಗೆ ಹಣಕಾಸು ಹೇಳಿಕೆಗಳನ್ನು ಸಲ್ಲಿಸಲು ಚುನಾವಣಾ ಆಯೋಗವು ಇಂದು ಆನ್‌ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಪೋರ್ಟಲ್ ಕೊಡುಗೆಯ ವರದಿ, ಲೆಕ್ಕಪರಿಶೋಧಕ ವಾರ್ಷಿಕ ಖಾತೆ ಮತ್ತು ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚದ ಹೇಳಿಕೆಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಲು ಅನುಕೂಲ ಮಾಡಿಕೊಡುತ್ತದೆ. ಆನ್‌ಲೈನ್...

Read More

ಅಮರನಾಥ ಯಾತ್ರೆಗೆ ಆನ್‌ಲೈನ್‌ ಮೂಲಕ ನೋಂದಾಯಿಸಿಕೊಂಡ 3.5 ಲಕ್ಷ ಜನ

ಜಮ್ಮು: ಪ್ರಸ್ತುತ ಅಮರನಾಥ ಯಾತ್ರೆಯು ಸುಸೂತ್ರವಾಗಿ ನಡೆಯುತ್ತಿದ್ದು,  ಅಮರನಾಥನ ಭಕ್ತರಲ್ಲಿ ಅಪಾರವಾದ ಉತ್ಸಾಹ ಕಂಡುಬರುತ್ತಿದೆ. ಅಮರನಾಥ ದೇಗುಲಕ್ಕೆ 4,758 ಯಾತ್ರಿಕರ ಹೊಸ ತಂಡ ಇಂದು ತೆರಳಿದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಂದು ಬೆಳಗಿನ ಜಾವದವರೆಗೆ ಸುಮಾರು 20,000 ಯಾತ್ರಿಕರು...

Read More

Recent News

Back To Top