
ಪಂಜಾಬ್‌ನ ಪವಿತ್ರ ಭೂಮಿಯಲ್ಲಿ ನಡೆದ ಆ ಒಂದು ಐತಿಹಾಸಿಕ ಘಟನೆಯಿಂದಾಗಿ ಮೊಘಲ್ ಆಕ್ರಮಣಕಾರರು ಕೂಡ ಭಾರತದ ಆಧ್ಯಾತ್ಮಿಕ ಶಕ್ತಿಯ ಮುಂದೆ ತಲೆಬಾಗಬೇಕಾಗಿ ಬಂತು. ಈ ಐತಿಹಾಸಿಕ ಘಟನೆ ಒಂದು ಕಡೆ ಮೊಘಲ್ ಆಕ್ರಮಣಕಾರ ಅಕ್ಬರ್, ಮತ್ತು ಇನ್ನೊಂದು ಕಡೆ ಗುರು ಅಮರ್ ದಾಸ್ ಅವರ ವ್ಯಕ್ತಿತ್ವವನ್ನು ಸಾರಿ ಹೇಳುತ್ತದೆ. ರಾಮ್ ದಾಸ್ ಅವರ ಬಳಿ ಸೈನ್ಯ ಅಥವಾ ಅರಮನೆ ಇರಲಿಲ್ಲ. ಆದರೂ ಅಕ್ಬರ್ ಗುರು ಅಮರ್ ದಾಸ್ ಅವರನ್ನು ಭೇಟಿಯಾಗಿದ್ದ. ಈ ಭೇಟಿ ಅಧಿಕಾರದಿಂದಲ್ಲ ಬದಲಾಗಿ ಸಮಾನತೆ, ಸೇವೆ ಮತ್ತು ತತ್ವಗಳಿಂದ ಕೂಡಿತ್ತು. ಮೊಘಲ್ ಆಕ್ರಮಣಕಾರ ಅಕ್ಬರ್, ಗುರು ಅಮರ್ ದಾಸ್ ಅವರ ವ್ಯಕ್ತಿತ್ವ ಮತ್ತು ಬೋಧನೆಗಳಿಂದ ಪ್ರಭಾವಿತನಾಗಿದ್ದ, ಅವನು ತನ್ನ ಇಸ್ಲಾಮಿಕ್ ವಿಸ್ತರಣಾ ನೀತಿಯನ್ನು ತ್ಯಜಿಸಿ ಒಂದಷ್ಟು ಭೂಮಿಯನ್ನು ದಾನ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ. ಆದರೆ, ಗುರು ಅಮರ್ ದಾಸ್ ಜಿ ಈ ಪ್ರಸ್ತಾಪವನ್ನು ತಿರಸ್ಕರಿಸಿದರು. ಈ ಘಟನೆಯು ಹೆಚ್ಚಿನ ಜನರಿಗೆ ತಿಳಿದಿಲ್ಲದ ಭಾರತೀಯ ಆಧ್ಯಾತ್ಮಿಕ ಸಂಪ್ರದಾಯದ ಒಂದು ಅಪರೂಪದ ಘಟನೆ.
ಈ ಘಟನೆ 1569 ರಲ್ಲಿ ಸಂಭವಿಸಿತು. ದೆಹಲಿಯಿಂದ ಲಾಹೋರ್‌ಗೆ ಹೋಗುವ ದಾರಿಯಲ್ಲಿ ಅಕ್ಬರ್ ಪಂಜಾಬ್‌ನ ಗೋಯಿಂಡ್ವಾಲ್‌ನಲ್ಲಿ ನಿಂತ. ಅಲ್ಲಿ, ಗುರು ಅಮರ್ ದಾಸ್ ಜಿ ಬಗ್ಗೆ ತಿಳಿದುಕೊಂಡ, ಆ ಸಮಯದಲ್ಲಿ ಅಕ್ಬರ್ ಸುಲ್-ಎ-ಕುಲ್ ಎಂಬ ರಾಜತಾಂತ್ರಿಕ ಉಪಕ್ರಮವನ್ನು ಪ್ರಾರಂಭಿಸಿದ್ದ. ಇದರ ಅಡಿಯಲ್ಲಿ, ಆತ ಸನಾತನ ಧರ್ಮಕ್ಕೆ ಸಂಬಂಧಿಸಿದ ವಿವಿಧ ಪಂಗಡಗಳು ಮತ್ತು ಧರ್ಮಗಳ ಪ್ರಭಾವಿ ವ್ಯಕ್ತಿಗಳೊಂದಿಗೆ ಸಭೆಗಳನ್ನು ನಡೆಸಿದ್ದ. ಭಾರತದಲ್ಲಿ ಮೊಘಲರ ನಿರಂತರ ಇಸ್ಲಾಮಿಕ್ ಆಳ್ವಿಕೆಯನ್ನು ಅಧ್ಯಯನ ಮಾಡಲು ಇದು ಆತನ ರಾಜತಾಂತ್ರಿಕ ಕ್ರಮವೂ ಆಗಿತ್ತು. ಗುರು ಅಮರ್‌ದಾಸ್ ಜಿ ಅವರಿಗೆ ಅವರ ಶಿಷ್ಯರು ಅಕ್ಬರ್ ಆಗಮನದ ಬಗ್ಗೆ ತಿಳಿಸಿದ್ದರು. ಕೆಲವು ಅನುಯಾಯಿಗಳು ಅಕ್ಬರ್ ಅವರನ್ನು ಸ್ವಾಗತಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಬೇಕೆಂದು ಸೂಚಿಸಿದರು. ಆದರೆ, ಗುರು ಅಮರ್‌ದಾಸ್ ಜಿ ಇದಕ್ಕೆ ಒಪ್ಪಲಿಲ್ಲ. ಗುರುಗಳ ಆಸ್ಥಾನವು ರಾಜ ಅಥವಾ ಸಾಮಾನ್ಯ ಜನರ ನಡುವೆ ತಾರತಮ್ಯ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಇಲ್ಲಿ, ರಾಜನಾಗಿರಲಿ ಅಥವಾ ಪ್ರಜೆಯಾಗಿರಲಿ ಎಲ್ಲರೂ ಸಮಾನರು ಎಂದರು.
ಅಕ್ಬರ್ ತನ್ನ ಸೈನ್ಯದೊಂದಿಗೆ ಗೋಯಿಂಡ್ವಾಲ್ ಸಾಹಿಬ್ ಗುರುದ್ವಾರಕ್ಕೆ ಆಗಮಿಸಿದ. ಅಲ್ಲಿ ಆತನ ಮೊದಲು ಗೋಯಿಂಡ್ವಾಲ್ ಸಾಹಿಬ್ ಗುರುದ್ವಾರಕ್ಕೆ ಬಂದ, ಎಲ್ಲರೂ ಒಂದೇ ಸಾಲಿನಲ್ಲಿ ಕುಳಿತುಕೊಳ್ಳುವ ಲಂಗರ್ (ಸರಳ ಆಹಾರವನ್ನು ತಿನ್ನುವ ಸ್ಥಳ)ವನ್ನು ನೋಡಿದ. ಪ್ರಯಾಣಿಕರು, ಬಡವರು, ಅಪರಿಚಿತರು ಮತ್ತು ಸಂಗತ್‌ಗಾಗಿ ಲಂಗರ್ ಹಗಲು ರಾತ್ರಿ ತೆರೆದಿತ್ತು. ವ್ಯವಸ್ಥೆಗಳು ಎಲ್ಲರಿಗೂ ಸಮಾನವಾಗಿದ್ದವು. ಸೇವಕರು ಅಕ್ಬರ್ ಅವರನ್ನು ಲಂಗರ್‌ನಲ್ಲಿ (ತಿನ್ನುವ ಸ್ಥಳ) ಎಲ್ಲರೊಂದಿಗೆ ಕೂರಿಸಿದರು. ಅಕ್ಬರ್‌ಗೆ ಯಾವುದೇ ರಾಜ ಗೌರವಗಳು ಅಥವಾ ವಿಶೇಷ ಆಸನವನ್ನು ನೀಡಲಿಲ್ಲ. ಇದು ಸಮಾನತೆಯ ಜೀವಂತ ಸಂದೇಶವಾಗಿತ್ತು. ಇದರಿಂದ ಆತ ಆಶ್ಚರ್ಯಚಕಿತನಾದ, ಏಕೆಂದರೆ ಇಸ್ಲಾಂನಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿರುವ ವ್ಯವಸ್ಥೆ ಇರಲಿಲ್ಲ. ಲಂಗರ್‌ನಲ್ಲಿ ಸೇವೆ ಸಲ್ಲಿಸುವ ಜನರು ಸ್ವತಃ ಭಕ್ತರಾಗಿದ್ದರು ಮತ್ತು ಸಮುದಾಯದ ಸಹಕಾರದೊಂದಿಗೆ ಆಹಾರವನ್ನು ತಯಾರಿಸಲಾಗುತ್ತಿತ್ತು ಎಂಬುದನ್ನು ಅಕ್ಬರ್ ಗಮನಿಸಿದ. ಈ ವ್ಯವಸ್ಥೆಯು ಅವನ ಮೇಲೆ ಆಳವಾದ ಪ್ರಭಾವ ಬೀರಿತು, ಏಕೆಂದರೆ ಅಲ್ಲಿ ಅಧಿಕಾರವನ್ನಲ್ಲ, ಸೇವೆಯನ್ನು ಗೌರವಿಸಲಾಗುತ್ತಿತ್ತು, ಅಲ್ಲಿ ಅಧಿಕಾರವಲ್ಲ, ಸಮಾನತೆ ಇತ್ತು. ಗುರು ಅಮರದಾಸ ಜಿ ಅವರ ಈ ಆದರ್ಶವು ಅವನ ಕಾಲದ ಸಾಮಾಜಿಕ ರಚನೆಗೆ ಆಳವಾಗಿ ಸ್ಫೂರ್ತಿದಾಯಕವಾಗಿತ್ತು.
ಊಟದ ನಂತರ, ಅಕ್ಬರ್ ಗುರು ಅಮರದಾಸ ಜಿ ಅವರೊಂದಿಗೆ ಮಾತನಾಡಿದಾಗ, ಅವರ ತೇಜಸ್ಸಿನಿಂದ ಕೂಡಿದ ವ್ಯಕ್ತಿತ್ವದಿಂದ ಆಶ್ಚರ್ಯಚಕಿತನಾದ. ಗುರುಗಳ ವಯಸ್ಸಿನ ಹೊರತಾಗಿಯೂ ಮುಖ ಕಾಂತಿಯಿಂದ ಹೊಳೆಯುತ್ತಿತ್ತು. ಎಲ್ಲಾ ಸಮಯದಲ್ಲೂ ಅತ್ಯುತ್ತಮ ವೈದ್ಯರನ್ನು ತನ್ನ ಬಳಿ ಇಟ್ಟುಕೊಳ್ಳುತ್ತಿದ್ದ, ಅತ್ಯುತ್ತಮ ಆಹಾರವನ್ನು ತಯಾರಿಸಿ ತಿನ್ನುತ್ತಿದ್ದ ಅಕ್ಬರನಿಗೆ ಗುರುಗಳ ಮುಖವು ಕಾಂತಿಯುತವಾಗಿ ಇರಲು ಕಾರಣವೇನೆಂದು ಕುತೂಹಲ ಮೂಡಿತ್ತು. ಆತ ನೇರವಾಗಿಯೇ ತನ್ನ ಮನಸ್ಸಿನ ಪ್ರಶ್ನೆಯನ್ನು ಗುರುಗಳಿಗೆ ಕೇಳಿಬಿಟ್ಟ, ಗುರು ಅಮರದಾಸ ಜಿ ಮುಗುಳ್ನಗುತ್ತಾ ಅಕ್ಬರನಿಗೆ ಉತ್ತರಿಸಿದರು, ಮುಖದಲ್ಲಿನ ಹೊಳಪು ಯಾವುದೇ ವಿಶೇಷ ಆಹಾರದಿಂದಲ್ಲ, ದೇವರ ನಿರಂತರ ಸ್ಮರಣೆ, ಸೇವೆ ಮತ್ತು ಸತ್ಯದ ಮಾರ್ಗದಿಂದ ಬರುತ್ತದೆ ಎಂದರು. ಈ ಉತ್ತರವು ಕೇವಲ ಅಕ್ಬರ್‌ನ ಪ್ರಶ್ನೆಗೆ ಪ್ರತಿಕ್ರಿಯೆಯಾಗಿರಲಿಲ್ಲ, ಆದರೆ ವ್ಯಕ್ತಿಯ ನಿಜವಾದ ಸೌಂದರ್ಯವು ಬಾಹ್ಯ ವೈಭವದಿಂದಲ್ಲ, ದೇವರ ಸ್ಮರಣೆ ಮತ್ತು ಒಳಗಿನ ನಿಸ್ವಾರ್ಥ ಸೇವೆಯಿಂದ ಬರುತ್ತದೆ ಎಂಬ ಸಂದೇಶವಾಗಿತ್ತು.
ಗುರು ಅಮರದಾಸ ಜಿ ಅವರ ತತ್ವಗಳು ಮತ್ತು ಲಂಗರ್ ವ್ಯವಸ್ಥೆಯಿಂದ ಪ್ರಭಾವಿತರಾನ ಅಕ್ಬರ್, ಹೊರಡುವ ಮೊದಲು ಅವರಿಗೆ ಒಂದು ಪ್ರಸ್ತಾಪವನ್ನು ಮುಂದಿಟ್ಟ. ಈ ಮಹಾನ್ ಸೇವೆಯನ್ನು ದೊಡ್ಡ ಪ್ರಮಾಣದಲ್ಲಿ ಮುಂದುವರಿಸಲು ಲಂಗರ್ ಕಾರ್ಯಾಚರಣೆಗಾಗಿ ಭೂಮಿಯನ್ನು ದಾನ ಮಾಡಲು ಬಯಸುವುದಾಗಿ ಹೇಳಿದ. ಆದರೆ, ಗುರು ಅಮರದಾಸ ಜಿ ಈ ಪ್ರಸ್ತಾಪವನ್ನು ತಿರಸ್ಕರಿಸಿದರು. ಗುರುನಾನಕರ ಸಂಪ್ರದಾಯವು ಪ್ರಾಮಾಣಿಕವಾಗಿ ಸಂಪಾದಿಸುವುದು ಮತ್ತು ಗಳಿಸಿದ ಹಣವನ್ನು ಇತರರೊಂದಿಗೆ ಹಂಚಿಕೊಳ್ಳುವುದನ್ನು ಆಧರಿಸಿದೆ ಎಂದು ಅವರು ಅಕ್ಬರ್‌ಗೆ ವಿವರಿಸಿದರು. ಗುರುಗಳ ಲಂಗರ್ ರಾಜಮನೆತನದ ದೇಣಿಗೆಗಳ ಮೇಲೆ ನಡೆಯುತ್ತಿಲ್ಲ, ಸಂಗತ್‌ನ ಭಕ್ತಿ, ಸೇವೆ ಮತ್ತು ಸ್ವಯಂಪ್ರೇರಿತ ಕೊಡುಗೆಗಳ ಮೇಲೆ ನಡೆಯುತ್ತದೆ. ರಾಜಮನೆತನದ ದೇಣಿಗೆಗಳನ್ನು ಸ್ವೀಕರಿಸುವುದು ಲಂಗರ್ ಅನ್ನು ಸ್ಥಾಪಿಸಿದ ಮೂಲಭೂತ ಮನೋಭಾವಕ್ಕೆ ವಿರುದ್ಧವಾಗಿರುತ್ತದೆ. ಇಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ನೀಡುತ್ತಾನೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಪಡೆಯುತ್ತಾನೆ ಎಂದು ಗುರುಗಳು ಸ್ಪಷ್ಟಪಡಿಸಿದರು. ಅದಕ್ಕಾಗಿಯೇ ಈ ವ್ಯವಸ್ಥೆಯು ಯಾವುದೇ ಶ್ರೇಷ್ಠತೆ ಅಥವಾ ಅವಲಂಬನೆಯ ಭಾವನೆಯನ್ನು ಸೃಷ್ಟಿಸುವುದಿಲ್ಲ ಎಂದರು.
ಗುರು ಅಮರದಾಸ ಜಿ ಅವರ ಆಲೋಚನೆಗಳನ್ನು ಕೇಳಿದ ಅಕ್ಬರ್ ಅವರ ಮುಂದೆ ತಲೆಬಾಗಿದ. ಹೀಗಾಗಿ, ಈ ಘಟನೆಯು ಚಕ್ರವರ್ತಿ ಮತ್ತು ಸಂತನ ನಡುವಿನ ಒಂದು ಭೇಟಿಯ ಪ್ರಸಂಗವಷ್ಟೇ ಆಗಿರಲಿಲ್ಲ, ಭಾರತದ ಆಧ್ಯಾತ್ಮಿಕ ಶಕ್ತಿಯ ಉದಾಹರಣೆಯಾಗಿತ್ತು. ಈ ಭೇಟಿ ಅಧಿಕಾರಗವನ್ನು ತತ್ವಗಳಿಗೆ ಮಣಿಯುವಂತೆ ಮಾಡಿತು. ಅದಕ್ಕಾಗಿಯೇ ಗುರು ರಾಮ್ ದಾಸ್ ಅವರ ವ್ಯಕ್ತಿತ್ವವನ್ನು ಇಂದಿಗೂ ಸೇವೆ, ಸಮಾನತೆ ಮತ್ತು ಸ್ವಾಭಿಮಾನದ ಅಮರ ಉದಾಹರಣೆ ಎಂದು ಪರಿಗಣಿಸಲಾಗಿದೆ. ಮೇ 5, 1479 ರಂದು ಜನಿಸಿದ ಗುರು ಅಮರದಾಸ ಜೀ ಸೆಪ್ಟೆಂಬರ್ 1, 1574 ರಂದು ನಿಧನರಾದರು. ಅವರು ತಮ್ಮ ಜೀವನದುದ್ದಕ್ಕೂ ಗುರುನಾನಕ್ ದೇವ್ ಜೀ ಅವರ ವಿಚಾರಗಳನ್ನು ಪ್ರಚಾರ ಮಾಡುವುದನ್ನು ಮುಂದುವರೆಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



