ಜೈಪುರ: ರಾಜಸ್ಥಾನದ ಮೊದಲ ಮೆಗಾ ಫುಡ್ ಪಾರ್ಕ್ನ್ನು ಕೇಂದ್ರ ಆಹಾರ ಸಚಿವೆ ಹರ್ಸಿಮ್ರಾಟ್ ಕೌರ್ ಗುರುವಾರ ಅಜ್ಮೇರಾದಲ್ಲಿ ಲೋಕಾರ್ಪಣೆಗೊಳಿಸಿದರು.
ಅಜ್ಮೇರಾದ ರೂಪಂಘಢ ಗ್ರಾಮದಲ್ಲಿ ಎಂ/ಎಸ್ ಗ್ರೀನ್ಟೆಕ್ ಮೆಗಾ ಫುಡ್ ಪಾರ್ಕ್ ಸ್ಥಾಪನೆಗೊಂಡಿದೆ. ರೂ,113.57 ಕೋಟಿ ವೆಚ್ಚದಲ್ಲಿ 85.44 ಎಕರೆ ಪ್ರದೇಶದಲ್ಲಿ ಇದು ನಿರ್ಮಾಣಗೊಂಡಿದೆ. ಸುಮಾರು 25 ಸಾವಿರ ರೈತರಿಗೆ ಇದರಿಂದ ಪ್ರಯೋಜನವಾಗಲಿದೆ.
ಇದರಲ್ಲಿ ಪ್ರಮುಖ 1 ಸಂಸ್ಕರಣಾ ಕೇಂದ್ರ ಮತ್ತು 4 ಪ್ರಾಥಮಿಕ ಸಂಸ್ಕರಣಾ ಕೇಂದ್ರಗಳಿವೆ. ಅಜ್ಮೇರ್ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳ ರೈತರಿಗೂ ಇದರಿಂದ ಪ್ರಯೋಜನವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.