ನವದೆಹಲಿ: ಪುಣೆ ಮೂಲದ ಶಸ್ತ್ರಾಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು(ಎಎಫ್ಎಂಸಿ)ಯಲ್ಲಿ ತರಬೇತಿ ಪಡೆದು ಬಳಿಕ ಮಿಲಿಟರಿಯನ್ನು ಬಿಟ್ಟು ತೆರಳುವ ವೈದ್ಯರು ಇನ್ನು ಮುಂದೆ ರೂ.2 ಕೋಟಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ.
ಪ್ರಸ್ತುತ ಸ್ನಾತಕೋತ್ತರ ಪದವಿ ಪಡೆದು ಮಿಲಿಟರಿ ಸೇವೆ ತೊರೆಯುವ ವೈದ್ಯರು ರೂ.28 ಲಕ್ಷ ಮತ್ತು ಪದವಿ ಪಡೆದು ತೊರೆಯುವ ವೈದ್ಯರು ರೂ.25 ಲಕ್ಷವನ್ನು ನೀಡಬೇಕಾಗಿದೆ. ಈಗ ಈ ಮೊತ್ತವನ್ನು ರೂ.2 ಕೋಟಿ ಮತ್ತು ರೂ.1 ಕೋಟಿಗೆ ಏರಿಕೆ ಮಾಡಲಾಗಿದೆ.
ಮಿಲಿಟರಿ ಕಾಲೇಜಿನಲ್ಲಿ ತರಬೇತಿಯನ್ನು ಪಡೆಯುವವರು ಕನಿಷ್ಠ 14ವರ್ಷ ಮಿಲಿಟರಿ ವೈದ್ಯರಾಗಿ ಸೇವೆ ಸಲ್ಲಿಸಬೇಕು. ಖಾಯಂ ಆಗಿ 20 ವರ್ಷ ಸೇವೆ ಸಲ್ಲಿಸಬಹುದು.
ಆದರೆ ಹೆಚ್ಚು ಸಂಪಾದನೆ ಮತ್ತು ಇತರ ಕಾರಣಗಳಿಗಾಗಿ ವೈದ್ಯರು ಮಿಲಿಟರಿಯನ್ನು ತೊರೆದು ಹೋಗುತ್ತಿದ್ದಾರೆ. ಹೀಗಾಗಿ ಬಾಂಡ್ ಮೊತ್ತವನ್ನು 2 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.