ಬೆಂಗಳೂರು: ಕ್ರಿಕೆಟ್ ತಾರೆ ರಾಹುಲ್ ದ್ರಾವಿಡ್ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಮೇ.12ರಂದು ಚುನಾವಣೆ ಜರುಗಲಿದೆ.
‘ರಾಹುಲ್ ದ್ರಾವಿಡ್ ಅವರು ಎಲೆಕ್ಷನ್ ಐಕಾನ್’ ಎಂದು ಮುಖ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಬೆಂಗಳೂರಿನಲ್ಲಿ ಘೋಷಿಸಿದ್ದಾರೆ. ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಮಹತ್ತರ ಜವಾಬ್ದಾರಿ ದ್ರಾವಿಡ್ ಮೇಲಿದೆ.
ಖ್ಯಾತ ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ ಅವರು ಕರ್ನಾಟಕ ವಿಧಾನಸಭಾ ಚುನಾವಣೆಗೆ ಟೈಟಲ್ ಸಾಂಗ್ ರಚನೆ ಮಾಡಲಿದ್ದಾರೆ. ಇದು ಚುನಾವಣಾ ಗೀತೆಯಾಗಲಿದ್ದು, ಒಂದು ವಾರದೊಳಗೆ ಬಿಡುಗಡೆಯಾಗಲಿದೆ.
ಇದೇ ಮೊದಲ ಬಾರಿಗೆ ವಿಕಲಚೇತನ ಸರ್ಕಾರಿ ಉದ್ಯೋಗಿಗಳು ಕೆಲವೊಂದು ಮತಗಟ್ಟೆಯಲ್ಲಿ ಸಿಬ್ಬಂದಿಗಳಾಗಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. 450 ಮತಗಟ್ಟೆಗಳು ಸಂಪೂರ್ಣ ಮಹಿಳಾ ಸಿಬ್ಬಂದಿಗಳನ್ನೇ ಒಳಗೊಳ್ಳಲಿದೆ.
224 ಸ್ಥಾನಗಳುಳ್ಳ ಕರ್ನಾಟಕದಲ್ಲಿ ಮೇ.12ಕ್ಕೆ ಚುನಾವಣೆ, ಮೇ.15ಕ್ಕೆ ಫಲಿತಾಂಶ ಘೊಷಣೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.