ಗ್ರಾಮೀಣ ಪ್ರದೇಶ ಎಂದರೆ ಈಗಿನ ಯುವಜನತೆಗೆ ಅಲರ್ಜಿ. ಡಾಕ್ಟರ್, ಎಂಜಿನಿಯರ್ ಮಗಿಸಿದ ಬಳಿಕ ಅವರು ತಮ್ಮ ಹಳ್ಳಿಯತ್ತ ಮುಖವನ್ನೂ ಮಾಡುವುದಿಲ್ಲ. ಆದರೆ ಇದಕ್ಕೆ ಅಪವಾದ ಎಂಬಂತೆ ಎಂಬಿಬಿಎಸ್ ೪ನೇ ಸೆಮಿಸ್ಟರ್ನಲ್ಲಿ ಓದುತ್ತಿರುವ ಯುವತಿಯೊಬ್ಬಳು ಸರಪಂಚ್ ಆಗಿ ಆಯ್ಕೆಯಾಗಿದ್ದಾಳೆ.
ರಾಜಸ್ಥಾನದ ಭರತ್ಪುರದ ಗರ್ಝಾಝನ್ ಗ್ರಾಮದ ಸರಪಂಚ್ ಆಗಿ 24 ವರ್ಷದ ಶಹನಾಝ್ ಖಾನ್ ಆಯ್ಕೆಯಾಗಿದ್ದಾರೆ. ಇವರು ಉತ್ತರಪ್ರದೇಶದ ತೀರ್ಥಂಕರ ಮಹಾವೀರ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ.
ಗರ್ಝಾಝಾನ ಗ್ರಾಮದ ಇತಿಹಾಸದಲ್ಲೇ ಈಕೆ ಅತೀಹೆಚ್ಚು ವಿದ್ಯಾವಂತೆಯಾಗಿದ್ದಾಳೆ ಮತ್ತು ಅತೀ ಕಿರಿಯ ಸರ್ಪಂಚ್ ಎಂಬ ಹೆಗ್ಗಳಿಕೆಗೂ ಪಾತ್ರಳಾಗಿದ್ದಾಳೆ.
‘ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಿದ ಪೋಷಕರ ಮುಂದೆ ನಾನು ನನ್ನ ಉದಾಹರಣೆಯನ್ನು ಪ್ರಸ್ತುತಪಡಿಸಲು ಬಯಸುತ್ತೇನೆ. ಹೆಣ್ಣು ಕಲಿತರೆ ಏನೂ ಬೇಕಾದರೂ ಆಗಬಲ್ಲಳು’ ಎಂದು ಶಹನಾಝ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.