ಸವನ್ನೆ: ಮಾರಿಷಿಯಸ್ನ ಅತೀ ಪವಿತ್ರ ಹಿಂದೂ ಕ್ಷೇತ್ರ ಎಂದು ಕರೆಯಲ್ಪುಡುವ ಗಂಗಾ ತಲಾವ್ನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಕೋವಿಂದ್ ಅವರು ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.
ಭಾನುವಾರ ಕೋವಿಂದ್ ಮಾರಿಷಿಯಸ್ಗೆ ಬಂದಿಳಿದಿದ್ದು, ಏರ್ಪೋರ್ಟ್ನಲ್ಲಿ ಅವರನ್ನು ಅಲ್ಲಿನ ಪ್ರಧಾನಿ ಪ್ರವಿಂದ್ ಕುಮಾರ್ ಜಗನ್ನಾಥ್ ಮತ್ತು ಸಂಪುಟ ಸದಸ್ಯರು ಆತ್ಮೀಯ ಸ್ವಾಗತವನ್ನು ಕೋರಿದ್ದಾರೆ.
ಮೋಕದಲ್ಲಿನ ಮಹಾತ್ಮ ಗಾಂಧಿ ಇನ್ಸ್ಟಿಟ್ಯೂಟ್ಗೆ ಆಗಮಿಸಿ ಅಲ್ಲಿಮಹಾತ್ಮ ಗಾಂಧಿ ಪ್ರತಿಮೆಗೆ ನಮನವನ್ನು ಸಲ್ಲಿಸಿದರು, ಈ ವೇಳೆ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಯುವಜನರು ಅಲ್ಲಿ ನೆರೆದಿದ್ದರು.
ಈ ವೇಳೆ ಮಾತನಾಡಿದ ಕೋವಿಂದ್, ‘ಮಾರಿಷಿಯಷ್ ಭೇಟಿಗೆ ಹೆಮ್ಮೆಪಡುತ್ತೇನೆ, ವಸಾಹತುಶಾಹಿಯಿಂದ ಸ್ವಾತಂತ್ರ್ಯವನ್ನು ಪಡೆದು ಮಾರಿಷಿಯಸ್ 50 ವರ್ಷಗಳನ್ನು ಪೂರೈಸಿದೆ. ಇದು ಇತಿಹಾಸದಲ್ಲಿ ಮೈಲಿಗಲ್ಲಿನ ಸನ್ನಿವೇಶವಾಗಿದೆ’ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.