ಪ್ರಮಾಣಿಕನಾದ ವ್ಯಕ್ತಿ ಎಷ್ಟೇ ತೊಂದರೆಗೀಡಾದರು ಒಂದಲ್ಲ ಒಂದು ರೂಪದಲ್ಲಿ ಸಹಾಯವನ್ನು ಪಡೆಯುತ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಈ ಆಟೋ ಡ್ರೈವರ್ ತೋರಿಸಿದ ಪ್ರಮಾಣಿಕತೆಯ ಕಾರಣದಿಂದಾಗಿ ಆತನ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಿದೆ.
ಅರುಣೋದಯ ಇಂಗ್ಲೀಷ್ ಸ್ಕೂಲ್ ನಡೆಸುತ್ತಿರುವ 68 ವರ್ಷದ ಸರಳಾ ನಂಬೋದರಿ ಎಂಬುವವರು ಸ್ಕೂಲ್ನಿಂದ ತಾವು ಕಾರು ಪಾರ್ಕ್ ಮಾಡಿದ್ದ ಜಾಗಕ್ಕೆ ಆಟೋ ಮೂಲಕ ತೆರಳಿದ್ದರು. ಈ ವೇಳೆ ಮಕ್ಕಳಿಂದ ಸಂಗ್ರಹಿಸಿದ್ದ ಫೀಸ್ ಹಣ 80 ಸಾವಿರ ರೂಪಾಯಿ, ಡೆಬಿಟ್, ಕ್ರೆಡಿಟ್ ಕಾರ್ಡ್ಗಳು, ಸೆಲ್ ಫೋನ್ ತುಂಬಿದ್ದ ಚೀಲವನ್ನು ಆಟೋದಲ್ಲೇ ಮರೆತು ಹೋಗಿದ್ದರು.
ಆದರೆ ಚಾಲಕ ಅಮಿತ್ ಗುಪ್ತಾ ಇದನ್ನು ಕಂಡೊಡನೆ ಅರ್ಧ ಗಂಟೆಯಲ್ಲೇ ಶಾಲೆಗೆ ಬಂದು ಸರಳಾ ಅವರ ನಗದು ಸಮೇತ ವಸ್ತುಗಳಿದ್ದ ಹಣವನ್ನು ಮರಳಿಸಿದ್ದಾನೆ. ಆತನ ಪ್ರಾಮಾಣಿಕತೆ ಕಂಡು ಪುಳಕಿತರಾದ ಸರಳಾ ಆತನ ಬಡತನವನ್ನೂ ಅರ್ಥ ಮಾಡಿಕೊಂಡರು. ಹೀಗಾಗೀ ಆತನ ಮಕ್ಕಳಿಗೆ ತನ್ನ ಶಾಲೆಯಲ್ಲಿ ಉಚಿತ ಶಿಕ್ಷಣವನ್ನು ನೀಡಲು ನಿರ್ಧರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.