ನಾಸಿಕ್ನ ಶಾಲೆಯೊಂದರ ಮಕ್ಕಳು ತಯಾರಿಸಿದ ತೇಲುವ ಸೈಕಲ್ ಈ ವರ್ಷದ ರಾಷ್ಟ್ರೀಯ ವಿಜ್ಞಾನ ದಿನದಂದು ಲೋಕಾರ್ಪಣೆಗೊಂಡಿದೆ. ಈ ಸೈಕಲ್ನ ವಿಶೇಷತೆಯೆಂದರೆ ಇದು ನೀರಿನ ಮೇಲೆ ತೇಲುತ್ತದೆ. ಕೆರೆ, ತೊರೆ, ಕೊಳಗಳನ್ನು ದಾಟಲು ಇದು ಅತ್ಯಂತ ಉಪಯುಕ್ತ ಸೈಕಲ್ ಆಗಿದೆ.
ತಮ್ಮ ವಿಜ್ಞಾನ ಶಿಕ್ಷಕಿ ಕಲ್ಯಾಣಿ ಜೋಶಿ ಅವರ ಮಾರ್ಗದರ್ಶನದಲ್ಲಿ ಎಸ್ಪಲೈಯರ್ ಎಕ್ಸ್ಪರಿಮೆಂಟಲ್ ಸ್ಕೂಲ್ನ ೭ನೇ ತರಗತಿ ವಿದ್ಯಾರ್ಥಿಗಳು ಈ ಸೈಕಲ್ ತಯಾರಿಸಿದ್ದಾರೆ. ಕಬ್ಬಿಣವನ್ನು ಕಟ್ಟಿಂಗ್ ಮಾಡಿ, ವೆಲ್ಡಿಂಗ್ ಮಾಡಿ ಅದನ್ನು ಜೋಡಿಸುವ ಮೂಲಕ, ಅದನ್ನು ಬಳಿಕ 8 ಖಾಲಿಯಾದ ಕ್ಯಾನಗಳಿಗೆ ಅಳವಡಿಸುವ ಮೂಲಕ ತೇಲುವ ಸೈಕಲ್ ತಯಾರಿಸಲಾಗಿದೆ.
ಮಕ್ಕಳಿಗೆ ಕಬ್ಬಿಣ ಕಟ್ಟಿಂಗ್, ವೆಲ್ಡಿಂಗ್ ಕೆಲಸ ಸೂಕ್ತವಲ್ಲವಾದ್ದರಿಂದ ಹಲವಾರು ಸುರಕ್ಷಿತ ವಿಧಾನಗಳನ್ನು ಅನುಸರಿಸಿ ಅವರಿಂದ ಕಾರ್ಯ ಮಾಡಿಸಲಾಗಿದೆ. ಅವರ ಪ್ರಯತ್ನದ ಫಲವಾಗಿ ಅತೀ ಅಗ್ಗದ, ಹೆಚ್ಚು ಪ್ರಯೋಜನದ ಸೈಕಲ್ ರೂಪುಗೊಂಡಿದೆ.
ಕೆರೆ, ನದಿ, ಹಳ್ಳಗಳನ್ನು ಸ್ವಚ್ಛ ಮಾಡಲು, ದಾಟಲು ಈ ಸೈಕಲ್ ಅತ್ಯಂತ ಪ್ರಯೋಜನಕಾರಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.