ನವದೆಹಲಿ: ಭಾರತ 16 ರಾಷ್ಟ್ರಗಳನ್ನೊಳಗೊಂಡ ಬೃಹತ್ ನೌಕಾ ಸಮರಾಭ್ಯಾಸವನ್ನು ಮಾ.6ರಿಂದ ಹಮ್ಮಿಕೊಳ್ಳಲಿದೆ. ಪ್ರಾದೇಶಿಕ ಸಹಕಾರವನ್ನು ವಿಸ್ತರಿಸಲು ಮತ್ತು ಸಮುದ್ರ ಭಾಗದಲ್ಲಿನ ಕಾನೂನು ಬಾಹಿರ ಚಟುವಟಿಕೆಗಳಿಗೆ ತಡೆ ನೀಡಲು ಈ ಸಮರಾಭ್ಯಾಸ ನಡೆಯುತ್ತಿದೆ.
ಈ ಬೃಹತ್ ನೌಕಾ ಸಮರಾಭ್ಯಾಸಕ್ಕೆ ‘ಮಿಲನ್’ ಎಂದು ಹೆಸರಿಸಲಾಗಿದ್ದು, ಅಂಡಮಾನ್ ಮತ್ತು ನಿಕೋಬರ್ ದ್ವೀಪದಲ್ಲಿ ಆಯೋಜನೆಗೊಳ್ಳಲಿದೆ.
ಚೀನಾದ ಏರುತ್ತಿರುವ ಮಿಲಿಟರಿ ಪ್ರಭಾವ ಇಂಡೋ-ಪೆಸಿಫಿಕ್ ಭಾಗಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ, ‘ಮಿಲನ್’ನಲ್ಲಿ ಭಾಗಿಯಾಗುವ ರಾಷ್ಟ್ರಗಳ ನೌಕಾ ಮುಖ್ಯಸ್ಥರ ನಡುವೆ ನಡೆಯಲಿರುವ ಮಾತುಕತೆಯ ವೇಳೆ ಈ ಬಗ್ಗೆ ವಿಷಯ ಚರ್ಚಿತವಾಗಲಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.