ರಾಯ್ಪುರ: ಛತ್ತೀಸ್ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ನಿಯೋಜನೆಗೊಂಡಿರುವ ಸಿಆರ್ಪಿಎಫ್ ಸ್ಥಳಿಯ ಜನರಿಗೆ ತುರ್ತು ಆರೋಗ್ಯ ಸೇವೆಯನ್ನು ಒದಗಿಸುವ ಸಲುವಾಗಿ ಬೈಕ್ ಅಂಬ್ಯುಲೆನ್ಸ್ನ್ನು ಆರಂಭಿಸಿದೆ.
ಬಸ್ತರ್ ಪ್ರದೇಶದ ಕುಗ್ರಾಮದ ಜನರಿಗಾಗಿ ಬೈಕ್ ಅಂಬ್ಯುಲೆನ್ಸ್ ಆರಂಭಗೊಂಡಿದೆ. ಶಸ್ತ್ರ ಸಜ್ಜಿತ ಯೋಧರ ಕಣ್ಗಾವಲಿನಲ್ಲಿ ಪರಿಣಿತ ವೈದ್ಯಕೀಯ ತಂಡ ಇದನ್ನು ಮುನ್ನಡೆಸುತ್ತಿದೆ. ಕಾಡಿನೊಳಗೆ ಗಾಯಗೊಂಡ, ಅಸ್ವಸ್ಥಗೊಂಡ ಜನರಿಗೆ ವೈದ್ಯಕೀಯ ನೆರವನ್ನು ಇದರ ಮೂಲಕ ನೀಡಲಾಗುತ್ತದೆ.
ಕೆಲ ವರ್ಷಗಳ ಹಿಂದೆ ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ಮೋಟಾರ್ ಬೈಕ್ಗಳನ್ನು ಸಿಆರ್ಪಿಎಫ್ ಖರೀದಿ ಮಾಡಿತ್ತು. ಇದೀಗ ಅದನ್ನೇ ಅಂಬ್ಯುಲೆನ್ಸ್ ಮಾಡಿಕೊಂಡ ಜನರಿಗೆ ವೈದ್ಯಕೀಯ ನೆರವು ನೀಡುತ್ತಿದೆ.
ಪರಿಣಿತ ವೈದ್ಯರು, ಸಹಾಯಕರು ವೈದ್ಯಕೀಯ ತಂಡದಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.