ನವದೆಹಲಿ: ನಮ್ಮವರನ್ನು ಕಳೆದುಕೊಳ್ಳುವಾಗ ಆಗುವ ನೋವನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ಸೈನಿಕರು ಮತ್ತು ಅವರ ಕುಟುಂಬಿಕರು ತಮ್ಮವರ ಅಗಲುವಿಕೆಯ ಸಂದರ್ಭದಲ್ಲಿ ತೋರಿಸುವ ಅಪ್ರತಿಮ ಧೈರ್ಯ ನಮಗೆಲ್ಲಾ ಸ್ಫೂರ್ತಿ.
ಫೆ.15ರಂದು ವಿಂಗ್ ಕಮಾಂಡರ್ ದುಶ್ಯಂತ್ ವ್ಯಾಟ್ಸ್ ಅವರು ಅಸ್ಸಾಂನಲ್ಲಿ ನಡೆದ ಹೆಲಿಕಾಫ್ಟರ್ ಪತನದಲ್ಲಿ ಜೀವ ತೆತ್ತಿದ್ದರು. ಅವರ ಅಂತಿಮ ಸಂಸ್ಕಾರಕ್ಕೆ ಅವರ ಪತ್ನಿ ಹಾಗೂ ಯೋಧೆ ಮೇಜರ್ ಕುಮುದ ದೋಗ್ರಾ ಅವರು 5 ದಿನಗಳ ತನ್ನ ನವಜಾತ ಶಿಶವನ್ನು ಕೈಯಲ್ಲಿ ಇಟ್ಟುಕೊಂಡು, ಸಮವಸ್ತ್ರ ಧರಿಸಿ ಬಂದು ಗೌರವ ನಮನ ಸಲ್ಲಿಸಿದ್ದಾರೆ.
ದುಃಖದಲ್ಲೂ ಮೇಜರ್ ಕುಮುದಾ ಅವರು ತೋರಿಸಿದ ದಿಟ್ಟತನ. ಧೈರ್ಯ ನಿಜಕ್ಕೂ ಅಪ್ರತಿಮವಾದುದು. ಮಗುವನ್ನು ಹೊತ್ತು ಪತಿಗೆ ಗೌರವ ಸಲ್ಲಿಸಲು ಅವರು ಆಗಮಿಸುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.