ಶ್ರೀನಗರ: ಹವಮಾನ ವೈಪರೀತ್ಯ ಎಂಬುದು ಜಾಗತಿಕ ಸಮಸ್ಯೆಯಾಗಿದ್ದು, ಇದನ್ನು ನಿವಾರಿಸಲು ಹಲವಾರು ಅಧ್ಯಯನ, ಸಂಶೋಧನೆ, ಪ್ರಯತ್ನಗಳು ನಡೆಯುತ್ತಿವೆ. ಇದೀಗ ಜಮ್ಮು ಕಾಶ್ಮೀರ ಐಆರ್ಎಸ್ ಅಧಿಕಾರಿ ಅಫಖ್ ಅಹ್ಮದ್ ಗಿರಿ ಎಂಬುವವರು ಅಂಟಾರ್ಟಿಕದ ಹವಮಾನ ವೈಪರೀತ್ಯದ ಬಗ್ಗೆ ಅಧ್ಯಯನ ಕೈಗೊಳ್ಳಲು ಮುಂದಾಗಿದ್ದಾರೆ.
ಫೆ.27ರಿಂದ 30 ವರ್ಷದ ಅಫಖ್ ಅಂಟಾರ್ಟಿಕ ಪ್ರವಾಸವನ್ನು ಆರಂಭಿಸಲಿದ್ದಾರೆ. ಅವರು 80 ಪರಿಸರ ತಜ್ಞರು ಮತ್ತು ಹವಮಾನ ವೈಪರೀತ್ಯ ತಜ್ಞರನ್ನು ಒಳಗೊಂಡ ಅಂತಾರಾಷ್ಟ್ರೀಯ ಗುಂಪಿನ ಸದಸ್ಯತ್ವವನ್ನು ಪಡೆದುಕೊಳ್ಳಲಿದ್ದಾರೆ. ಈ ಗುಂಪು ಫೆ.28ರಿಂದ ತನ್ನ ಯಾತ್ರೆಯನ್ನು ಶಿಪ್ ಮೂಲಕ ಅರ್ಜೆಂಟೀನಾದ ಉಶಿಯಾಯಾದಿಂದ ಆರಂಭಿಸಲಿದೆ.
ಅಫಖ್ ಅವರು ಜಮ್ಮುವಿನ ಸೈನಿಕ್ ಸ್ಕೂಲ್ ನಗ್ರೊಟದ ಮಾಜಿ ವಿದ್ಯಾರ್ಥಿಯಾಗಿದ್ದಾರೆ. ಇವರು ಇಂಡಿಯನ್ ರೆವೆನ್ಯೂ ಸರ್ವಿಸ್ನ 2015ರ ಬ್ಯಾಚ್ನ ಅಧಿಕಾರಿಯಾಗಿದ್ದಾರೆ. ರಾಮ್ಬನ್ ಜಿಲ್ಲೆಯ ನ್ಕೂಟ್ ನಿವಾಸಿಯಾಗಿದ್ದಾರೆ.
2017ರ ಅಕ್ಟೋಬರ್ನಲ್ಲಿ ಇವರು ಕ್ಲೈಮೇಟ್ ಫೋರ್ಸ್ಗೆ ವಿಶ್ವದಾದ್ಯಂತ ಅರ್ಜಿ ಸಲ್ಲಿಸಿದ 5 ಸಾವಿರ ಮಂದಿಯಲ್ಲಿ ಆಯ್ಕೆಯಾದ 80 ಮಂದಿಯಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.