ಲೇಹ್: ಚಳಿಗಾಲದ ನೀರನ್ನು ಸಂರಕ್ಷಿಸಿ ಅದನ್ನು ಬರಗಾಲದ ವೇಳೆಯಲ್ಲಿ ಬಳಸಿಕೊಳ್ಳುವ ಸಲುವಾಗಿ ಜಮ್ಮು ಕಾಶ್ಮೀರದ ಲೇಹ್ನಲ್ಲಿ ಕೃತಕವಾಗಿ ಮಂಜುಗಡ್ಡೆಯ ಸ್ತೂಪವನ್ನು ನಿರ್ಮಾಣ ಮಾಡಲಾಗಿದೆ.
ಇದೀಗ ಈ ಐಸ್ ಸ್ತೂಪಗಳು ಸಾವಿರಾರು ಸಂಖ್ಯೆಯ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವೂ ಆಗಿದೆ.
ಲಡಾಖ್ ಪ್ರದೇಶದ ಹಿಮ ಪರ್ವತದ ಎತ್ತರದಲ್ಲಿ ಚಳಿಗಾಲದ ಹಿಮಪಾತಗಳಿಂದ ಗ್ಲೇಸಿಯರ್ಗಳು ನೈಸರ್ಗಿಕವಾಗಿ ರಚನೆಯಾಗುತ್ತವೆ. ಇದು ಇಲ್ಲಿನ ರೈತರ ನೀರಾವರಿಯ ಮೂಲವಾಗಿದೆ. ಆದರೀಗ ಹವಮಾನ ವೈಪರೀತ್ಯದ ಪರಿಣಾಮವಾಗಿ ನೈಸರ್ಗಿಕ ಗ್ಲೇಸಿಯರ್ಗಳ ನಿರ್ಮಾಣ ಕುಗ್ಗುತ್ತಿದೆ. ಹೀಗಾಗಿ ಕೃತಕ ಐಸ್ ಸ್ತೂಪಗಳ ರಚನೆ ಮಾಡಲಾಗುತ್ತಿದೆ.
ಚಳಿಗಾಲ ನೀರು ಐಸ್ ಸ್ತೂಪದ ಮಾದರಿಯಲ್ಲಿ ಸಂರಕ್ಷಿಸಲ್ಪಡುತ್ತದೆ. ಬಳಿಕ ಬೇಸಿಗೆಯಲ್ಲಿ ಇದು ಕರಗುತ್ತಾ ಈ ಭಾಗದ ಜನರಿಗೆ ನೀರನ್ನು ಒದಗಿಸುತ್ತದೆ. ಅಲ್ಲದೇ ಇದರ ಕೆಳಗೆ ನಿರ್ಮಿಸಲಾಗುವ ಟ್ಯಾಂಕ್ನಲ್ಲಿ ಹೆಚ್ಚುವರಿ ನೀರುಗಳು ತುಂಬಿಕೊಳ್ಳುತ್ತವೆ.
ಲಡಾಖ್ನ ಐಸ್ಮ್ಯಾನ್ ಎಂದು ಕರೆಯಲ್ಪಡುವ ಚವ್ವಾಂಗ್ ನಾರ್ಫೆಲ್ ಅವರ ಐಡಿಯಾದ ಅನುಸಾರ ಈ ಐಸ್ ಸ್ತೂಪಗಳು ನಿರ್ಮಾಣಗೊಳ್ಳುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.