ಲಕ್ನೋ: ಪ್ರಾದೇಶಿಕವಾಗಿ ರಕ್ಷಣಾ ಉತ್ಪಾದನೆಗೆ ಉತ್ತೇಜನ ನೀಡುವ ಅಗತ್ಯತೆಯನ್ನು ಸಾರಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ಭಾರತ ಕುರುಡಾಗಿ ವಿದೇಶದಿಂದ ಖರೀದಿಯನ್ನು ಮಾಡುತ್ತಿದೆ, ಆದರೆ ನಮ್ಮಲ್ಲೇ ಉತ್ಪಾದನೆಗೆ ಸಾಕಷ್ಟು ಅವಕಾಶಗಳಿವೆ. ಇದನ್ನು ಬಳಸಿದರೆ ಆಮದು ವೆಚ್ಚವನ್ನು ತಗ್ಗಿಸಿಕೊಳ್ಳಬಹುದು’ ಎಂದಿದ್ದಾರೆ.
‘ಭಾರತ ಶಸ್ತ್ರಾಸ್ತ್ರ ಮತ್ತು ಪರಿಕರಗಳ ಖರೀದಿಯಲ್ಲಿ ವಿಶ್ವದಲ್ಲೇ ೩ನೇ ಸ್ಥಾನವನ್ನು ಹೊಂದಿದೆ. ಆದರೆ ನಾವು ಆಮದುಗಳನ್ನು ತಗ್ಗಿಸಿ ಸ್ಥಳೀಯವಾಗಿಯೇ ರಕ್ಷಣಾ ಸಾಮಾಗ್ರಿಗಳ ಉತ್ಪಾದನೆಯತ್ತ ಉತ್ತಮ ಯೋಜನೆಗಳನ್ನು ರೂಪಿಸಬೇಕಿದೆ’ ಎಂದಿದ್ದಾರೆ.
ಪ್ರಧಾನಿಯವರು ಸ್ಥಳಿಯ ಉತ್ಪಾದನಾ ಸೌಲಬ್ಯವನ್ನು ಉತ್ತೇಜಿಸುವ ಉದ್ದೇಶ ಹೊಂದಿದ್ದಾರೆ, ಅದಕ್ಕಾಗಿ ಗಟಕಗಳನ್ನು ತೆರೆಯಲು, ಖಾಸಗಿ ವಲಯವನ್ನು ಲಿಂಕ್ ಮಾಡಲು ಬಯಸಿದ್ದಾರೆ ಎಂದರು.
ಉತ್ತರಪ್ರದೇಶದಲ್ಲಿ ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್ ಸ್ಥಾಪನೆ ಮಾಡುವುದಾಗಿ ಘೋಷಿಸಿರುವ ಪ್ರಧಾನಿಯ ಕ್ರಮವನ್ನು ಅವರು ಸ್ವಾಗತಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.