ಚೆನ್ನೈ: ಅನಾಣ್ಯೀಕರಣಕ್ಕೆ ಒಳಗಾದ 500 ಮತ್ತು 1000 ಮುಖಬೆಲೆಯ ನೋಟುಗಳಿಗೆ ಚೆನ್ನೈನಲ್ಲಿ ಪುಝ್ಹಲ್ ಜೈಲಿನ ಕೈದಿಗಳು ಹೊಸ ಜೀವನವನ್ನು ನೀಡಿದ್ದಾರೆ. ನಿಷೇಧಿತ ನೋಟುಗಳನ್ನು ಕಛೇರಿ ಕಡತಗಳನ್ನಿಡುವ ಹೋಲ್ಡರ್ಸ್ಗಳಾಗಿ ಪರಿವರ್ತಿಸಿದ್ದಾರೆ.
ಇದೀಗ ಜೈಲಿನ ಹ್ಯಾಂಡ್ಮೇಡ್ ಪೇಪರ್ ಯುನಿಟ್ಗಳ ಕಚ್ಛಾವಸ್ತುಗಳು ಹಳೆ ಪೇಪರ್ಗಳ ಬದಲಾಗಿ ನಿಷೇಧಿತ ನೋಟುಗಳಾಗಿವೆ. ಟಿ.ರಾಜನ್ ಎಂಬ ಕೈದಿ ನೋಟುಗಳನ್ನು ಬಾಲ್ಗಳಾಗಿ ಮಾಡಿ ಬಳಿಕ ಅದನ್ನು ಕೊಳದಲ್ಲಿ ಹಾಕಿ ಮೆದು ತಿರುಳು ಸಿಗುವಂತೆ ಗ್ರೈಂಡ್ ಮಾಡುತ್ತಾರೆ. ಬಳಿಕ ಅದು ಅಚ್ಚಿನ ರೂಪಕ್ಕೆ ಬರುತ್ತದೆ, ಅದರಿಂದ ಕಾಗದದ ಡಬ್ಬಿಗಳನ್ನು ರಚನೆ ಮಾಡಬಹುದು.
ಮತ್ತೊಂದು ತಂಡ ಅದನ್ನು ಕಟ್ ಮಾಡಿ ಕಡತಗಳನ್ನು ಇಡುವ ಹೋಲ್ಡರ್ ಆಕಾರಕ್ಕೆ ತರುತ್ತದೆ. ಕಲರ್ ಪೇಪರ್ ಅಂಟಿಸುತ್ತದೆ. ಬಳಿಕ ಇದು ತಮಿಳುನಾಡಿನ ಸರ್ಕಾರಿ ಇಲಾಖೆಗಳಿಗೆ ರವಾನೆಯಾಗುತ್ತದೆ.
ರಿಸವ್ ಬ್ಯಾಂಕ್ ಆಫ್ ಇಂಡಿಯಾ 7 ಟನ್ಗಳಷ್ಟು ನಿಷೇಧಿತ ನೋಟುಗಳನ್ನು ಇವರಿಗೆ ನೀಡಿದೆ. ಇದರಿಂದ 14 ಸಾವಿರ ಹೋಲ್ಡರ್ಗಳನ್ನು ತಯಾರಿಸಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.