ರಾಚಕೊಂಡ: 2017ರ ಎಪ್ರಿಲ್ನಲ್ಲಿ ಬಾಲ್ಯವಿವಾಹಕ್ಕೆ ಒಳಗಾಗುತ್ತಿದ್ದ ಅಪ್ರಾಪ್ತೆಯನ್ನು ಪೊಲೀಸರು ರಕ್ಷಣೆ ಮಾಡಿದ್ದರು, ಇಂದು ಆಕೆ ರಾಷ್ಟ್ರ ಮಟ್ಟದ ಕ್ರಿಕೆಟರ್ ಮತ್ತು ರಗ್ಬಿ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾಳೆ.
ಆಕೆಯೇ ಎ.ಅನುಷಾ, ಕ್ರೀಡೆಯಲ್ಲಿ ತೋರಿದ ಅನನ್ಯ ಸಾಧನೆಗೆ ರಚಕೊಂಡ ಕಮಿಷನರ್ರಿಂದ ಸನ್ಮಾನಿತಳಾಗಿದ್ದಾಳೆ. ಆಕೆ ತನ್ನ ಕಥೆಯನ್ನು ಹೇಳಿಕೊಂಡಿದ್ದು ಹೀಗೆ..
10ನೇ ತರಗತಿಯಲ್ಲಿದ್ದಾಗ ನನಗೆ ಮನೆಯವರು ಮದುವೆ ಮಾಡಲು ಸಿದ್ಧತೆ ನಡೆಸಿದ್ದರು, ಒತ್ತಾಯದ ಹಿನ್ನಲೆಯಲ್ಲಿ ನಾನಿದಕ್ಕೆ ಒಪ್ಪಿಕೊಂಡಿದ್ದೆ. ಆದರೆ ಮದುವೆಗೆ 10 ದಿನಗಳ ಮುಂಚೆ ಮಕ್ಕಳ ರಕ್ಷಣಾ ಸಂಘ ಮತ್ತು ಪೊಲೀಸರು ಬಂದು ನನ್ನನ್ನು ಕಾಪಾಡಿ ಹಾಸ್ಟೆಲ್ನಲ್ಲಿ ಇಟ್ಟರು.
ಬಳಿಕ ಮನೆಗೆ ತೆರಳಿದ ಈಕೆ ಕಾಲೇಜಿಗೆ ಸೇರಿಕೊಂಡಳು. 9ನೇ ಕ್ಲಾಸ್ನಿಂದ ಕ್ರಿಕೆಟ್ ತರಬೇತಿ ಪಡೆದುಕೊಳ್ಳುತ್ತಿದ್ದ ನಾನು ಇಲ್ಲೂ ಅದನ್ನು ಮುಂದುವರೆಸಿದೆ. ತಂಡಕ್ಕೆ ಆಯ್ಕೆಯೂ ಆದೆ. ಇಂಧೋgನಲ್ಲಿ ನಡೆದ ಅಂಡರ್ 19 ಕ್ರಿಕೆಟ್ ಟೀಮ್ನಲ್ಲಿ ಆಡಿದೆ. ರಾಷ್ಟ್ರ ಮಟ್ಟದ ರಗ್ಬಿಯಲ್ಲೂ ಭಾಗವಹಿಸುತ್ತಿದ್ದೇನೆ.
ಕ್ರಿಕೆಟ್ನಲ್ಲಿ ಆಲ್ ರೌಂಡರ್ ಪ್ರದರ್ಶನ ನೀಡಿ ನಾನು ಭೇಷ್ ಎನಿಸಿಕೊಂಡಿದ್ದೇನೆ. ವಿವಾಹದಿಂದ ನನ್ನನ್ನು ಬಿಡಿಸಿದವರಿಗೆ ನಾನು ಆಭಾರಿಯಾಗಿದ್ದೇನೆ. ನನ್ನ ಇಂದಿನ ಸಆಧನೆಗೆ ಅವರೇ ಕಾರಣ.
ಬಾಲ್ಯ ವಿವಾಹ ತಪ್ಪು ಎಂದು ತಿಳಿದಿದ್ದೂ ಮಕ್ಕಳನ್ನು ವಿವಾಹ ಬಂಧನಕ್ಕೆ ದೂಡುವ ಪೋಷಕರು ಈಕೆಯ ಸಾಧನೆಯನ್ನು ನೋಡಿ ಅರ್ಥ ಮಾಡಿಕೊಳ್ಳಬೇಕಾದುದು ಸಾಕಷ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.