‘ಸಲಾಂ ಬಾಲಕ್’ ಟ್ರಸ್ಟ್ನ ಸ್ಥಾಪಕಿಯಾಗಿರುವ ಡಾ. ಪ್ರವೀಣ ನಾಯರ್ 80 ಸಾವಿರ ಮಕ್ಕಳಿಗೆ ಹೊಸ ಜೀವನವನ್ನು ನೀಡುವುದಕ್ಕಾಗಿ ಜೀವನ ಮುಡುಪಾಗಿಟ್ಟವರು. ಯುವ ವಯಸ್ಸಿನಿಂದಲೇ ರೆಡ್ಕ್ರಾಸ್, ಬಾಯಿ ಮತ್ತು ಶ್ರವಣ ಸಂಸ್ಥೆಗಳೊಂದಿಗೆ ನಿರಂತರ ಒಡನಾಟ ಬೆಳೆಸಿಕೊಂಡಿರುವ ಇವರು ಆರು ದಶಕಗಳಿಂದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
ಅವರ ಮಗಳು ಮೀರಾ ನಾಯರ್ ಅವರ ’ಸಲಾಂ ಬಾಂಬೆ’ ಸಿನಿಮಾ ಕೂಡ ಬೀದಿ ಮಕ್ಕಳ ಕುರಿತಾಗಿಯೇ ಇದೆ. ಅದರಿಂದ ಪ್ರೇರಿತಗೊಂಡೇ ನಾಯರ್ ಬೀದಿ ಮಕ್ಕಳ ಬದುಕಲ್ಲಿ ಬದಲಾವಣೆ ತರುವ ಕಾರ್ಯಕ್ಕೆ ಮುಂದಾದರು.1988ರಲ್ಲಿ ಸಲಾಂ ಬಾಲಕ್ ಸ್ಥಾಪನೆಗೊಳಿಸಿದರು. 25 ಮಕ್ಕಳು ಮತ್ತು 3 ಸಿಬ್ಬಂದಿಗಳಿಂದ ಆರಂಭಗೊಂಡ ಈ ಸಂಸ್ಥೆ ಇದುವರೆಗೆ 80 ಸಾವಿರ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತಂದಿದೆ.
ಮಕ್ಕಳಿಗೆ ವಸತಿ, ಆರೋಗ್ಯ ಸೇವೆ, ಶಿಕ್ಷಣ, ಪೌಷ್ಠಿಕ ಆಹಾರ, ಬಟ್ಟೆಬರೆ, ಸುಂದರ ವಾತಾವರಣವನ್ನು ಇಲ್ಲಿ ನೀಡಲಾಗುತ್ತಿದೆ. ಮಕ್ಕಳನ್ನು ಔಪಚಾರಿಕ ಶಾಲೆಗಳಿಗೆ ಕಳುಹಿಸಲಾಗುತ್ತದೆ, ಅವರಿಗೆ ಅನೌಪಚಾರಿಕ ಶಿಕ್ಷಣವನ್ನೂ ಇಲ್ಲಿ ನೀಡಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ, ಶೈಕ್ಷಣಿಕ ಪ್ರವಾಸಗಳಿಗೆ ಕರೆದೊಯ್ಯಲಾಗುತ್ತದೆ. ಒಟ್ಟಿನಲ್ಲಿ ಸಲಾಂ ಬಾಲಕ್ ಮೂಲಕ ಪ್ರವೀಣ ನಾಯರ್ ಅದ್ಭುತ ಕಾರ್ಯವನ್ನು ಭವಿಷ್ಯದ ಪ್ರಜೆಗಳಿಗಾಗಿ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.