ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿಯವರು ಸೋಮವಾರ ಸಂಸತ್ತಿನಲ್ಲಿ ಮಂಡನೆಗೊಳಿಸಿದ ಆರ್ಥಿಕ ಸಮೀಕ್ಷೆಯ ದಾಖಲೆ ಗುಲಾಬಿ ಬಣ್ಣದಲ್ಲಿತ್ತು. ಹೆಣ್ತನದ ಬಣ್ಣವಾದ ಗುಲಾಬಿ, ಮಹಿಳಾ ಪರವಾದ ನಿಲುವನ್ನು ಸ್ಪಷ್ಟಪಡಿಸಿದೆ.
ಮಹಿಳಾ ದೌರ್ಜನ್ಯದ ವಿರುದ್ಧ ಹೆಚ್ಚುತ್ತಿರುವ ಆಂದೋಲನಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಆರ್ಥಿಕ ಸಮೀಕ್ಷೆಯ ದಾಖಲೆಗೆ ಗುಲಾಬಿ ಬಣ್ಣವನ್ನು ಆಯ್ಕೆ ಮಾಡಲಾಗಿದೆ.
ಪುತ್ರನಿಗೆ ಪ್ರಾಮುಖ್ಯತೆ ನೀಡುವ ಸಾಮಾಜಿಕ ನಿಲುವನ್ನು ಭಾರತ ತೊಡೆದು ಹಾಕಬೇಕಿದೆ. ಪ್ರತಿಕೂಲ ಲಿಂಗಾನುಪಾತ 63 ಮಿಲಿಯನ್ ಹೆಣ್ಣು ಮಕ್ಕಳ ನಾಪತ್ತೆಗೆ ಕಾರಣವಾಗಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ಭಾರತ ಆರ್ಥಿಕವಾಗಿ ಬೆಳೆದರೂ ಪುತ್ರ ಪ್ರಾಧಾನ್ಯತೆ, ಗರ್ಭ ನಿರೋಧಕ ಬಳಸದಿರುವಿಕೆಯಂತಹ ಕೆಲವೊಂದು ಸಾಮಾಜಿಕ ಅಭ್ಯಾಸಗಳು ಹಾಗೆಯೇ ಉಳಿದಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.