ನವದೆಹಲಿ: ಲೋಕಸಭೆಯ ಮುಂದಿನ ಅವಧಿಯವರೆಗಾದರೂ ಸಿರಿವಂತ ಸಂಸದರು ತಮ್ಮ ವೇತನವನ್ನು ತೊರೆಯಬೇಕು ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಕರೆ ನೀಡಿದ್ದಾರೆ.
‘ಮೇಡಂ ಸ್ಪೀಕರ್ ಅವರೇ ಆರ್ಥಿಕವಾಗಿ ಸಿರಿವಂತರಾಗಿರುವ ಸಂಸದರು 16ನೇ ಲೋಕಸಭೆಯ ಮುಂದಿನ ಅವಧಿಯಲ್ಲಿ ತಮ್ಮ ವೇತನವನ್ನು ತ್ಯಜಿಸುವಂತೆ ಅಭಿಯಾನವನ್ನು ಆರಂಭಿಸಿ ಎಂದು ವಿನಂತಿಸುತ್ತೇನೆ’ ಎಂದು ಕೋರಿ ವರುಣ್ ಅವರು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಪತ್ರ ಬರೆದಿದ್ದಾರೆ.
ನಮ್ಮ ವೇತನಗಳನ್ನು ಮುಂದಿನ ಲೋಕಸಭೆಯ ರಚನೆಯವರೆಗೂ ಮೊಟಕುಗೊಳಿಸುವುದು ಒಂದು ಉತ್ತಮ ಸ್ವಾಗತಾರ್ಹ ಬೆಳವಣಿಗೆಯಾಗಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.