ನವದೆಹಲಿ: ಈ ಹಣಕಾಸು ವರ್ಷದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಕೇಂದ್ರದಿಂದ ಮರುಬಂಡವಾಳದ ರೂಪದಲ್ಲಿ ರೂ.88,139 ಕೋಟಿ ಅನುದಾನವನ್ನು ಪಡೆದುಕೊಳ್ಳಲಿವೆ.
2017ರ ಅಕ್ಟೋಬರ್ನಲ್ಲಿ ಕೇಂದ್ರ ರೂ.2.11 ಲಕ್ಷ ಕೋಟಿ ಮೊತ್ತದ ಮರುಬಂಡವಾಳ ಯೋಜನೆಯನ್ನು ಘೋಷಿಸಿತ್ತು. ಅದರನ್ವಯ ಮೊದಲ ಭಾಗವಾಗಿ ರೂ.88,139 ಕೊಟಿಯನ್ನು ಬಿಡುಗಡೆಗೊಳಿಸಲು ನಿರ್ಧರಿಸಿದೆ.
ಆರ್ಬಿಐನ ಪಿಸಿಎ ಅಡಿಯಲ್ಲಿ ಬರುವ 11 ಸಾರ್ವಜನಿಕ ವಲಯದ ಬ್ಯಾಂಕುಗಳು ರೂ.52,311 ಕೋಟಿ ಪಡೆಯಲಿವೆ. ಸಾಲದ ಹೊರೆ ಹೊತ್ತಿರುವ ಮತ್ತು ದುರ್ಬಳ ಆದಾಯ ಪಡೆಯುತ್ತಿರುವ ಬ್ಯಾಂಕುಗಳು ಪಿಸಿಎಯಡಿ ಇದೆ. ಇತರ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ರೂ.35,828 ಕೋಟಿಯನ್ನು ಪಡೆಯಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.