ದಾವೊಸ್: ಭಾರತ ಸುಧಾರಣೆಗಳನ್ನು ಅದರಲ್ಲೂ ಮುಖ್ಯವಾಗಿ ಹಣಕಾಸು ಸೇವಾ ವಲಯದಲ್ಲಿ ಸುಧಾರಣೆಗಳನ್ನು ತರುವುದನ್ನು ಮುಂದುವರೆಸಬೇಕು. ಅಲ್ಲದೇ ಶೀಘ್ರವಾಗಿ ವಿಸ್ತೃತ ಮತ್ತು ಆರ್ಥಿಕತೆಯಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯ ಬಗ್ಗೆ ಗಮನಕೇಂದ್ರೀಕರಿಸಬೇಕು ಎಂದು ಇಂಟರ್ನ್ಯಾಷನಲ್ ಮಾನಿಟರಿ ಫಂಡ್(ಐಎಂಎಫ್)ನ ಮುಖ್ಯಸ್ಥ ಕ್ರಿಸ್ಟೆನ್ ಲಗರ್ಡೆ ಹೇಳಿದದಾರೆ.
ದಾವೋಸ್ನಲ್ಲಿ ವರ್ಲ್ಡ್ ಎಕನಾಮಿಕ್ ಫೋರಂನ ಮಹಿಳಾ ಸಭೆಯ ಭಾಗವಾಗಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ’ಪುರುಷನ ಮಟ್ಟದಲ್ಲಿ ವರ್ಕ್ಫೋರ್ಸ್ನಲ್ಲಿ ಮಹಿಳೆ ಪಾಲ್ಗೊಂಡರೆ ಭಾರತದ ಆರ್ಥಿಕತೆ ಶೇ.27ರಷ್ಟು ಬೆಳವಣಿಗೆ ಕಾಣುತ್ತದೆ ಎಂಬುದು ಐಎಂಎಫ್ನ ರಿಸಚ್ನಿಂದ ತಿಳಿದು ಬಂದಿದೆ’ ಎಂದಿದ್ದಾರೆ.
ಗ್ರಾಮೀಣ ಭಾಗದ ಮಹಿಳೆಯರು ಭಾರತದಲ್ಲಿ ತಾರತಮ್ಯ ಎದುರಿಸುತ್ತಿದ್ದು, ಇದನ್ನು ತಕ್ಷಣ ಹತ್ತಿಕ್ಕಬೇಕು, ಆರ್ಥಿಕತೆಯಲ್ಲಿ ಅವರನ್ನೂ ಒಳಪಡಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಭಾರತ ಶೇ.೭.೩ರಷ್ಟು ಆರ್ಥಿಕ ಪ್ರಗತಿ ಕಾಣಲಿದೆ ಎಂದ ಅವರು, ವಿಶ್ವದ ಅತೀದೊಡ್ಡ ಶೀಘ್ರ ಬೆಳವಣಿಗೆಯ ಆರ್ಥಿಕತೆಯಾಗಿ ಹೊರಹೊಮ್ಮುವುದರಲ್ಲಿ ಸಂಶವಿಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.