ನವದೆಹಲಿ: ಭಾರತದ ಹೆಮ್ಮೆಯ ಸೈನಿಕರನ್ನು ಸ್ಮರಿಸಬೇಕಾದ ಸೇನಾ ದಿನವಿಂದು. 1949ರ ಈ ದಿನ ಸೇನೆಯ ಮೊತ್ತ ಮೊದಲ ಕಮಾಂಡರ್ ಇನ್ ಚೀಫ್ ಆಗಿ ಜನರಲ್ ಕಾರಿಯಪ್ಪನವರು ಅಧಿಕಾರ ಸ್ವೀಕಾರ ಮಾಡಿದರು. ಅಂದಿನಿಂದ ಜ.15 ನ್ನು ಸೇನಾದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೇನಾದಿನದ ಅಂಗವಾಗಿ ಸರಣಿ ಟ್ವಿಟರ್ಗಳ ಮೂಲಕ ಸೈನಿಕ ಶೌರ್ಯವನ್ನು ಕೊಂಡಾಡಿದ್ದಾರೆ.
‘ಆರ್ಮಿ ಡೇ ಅಂಗವಾಗಿ ಸೈನಿಕರಿಗೆ, ಮಾಜಿ ಸೈನಿಕರಿಗೆ ಅವರ ಕುಟುಂಬಗಳಿಗೆ ನನ್ನ ಶುಭಾಶಯಗಳು. ಪ್ರತಿ ಭಾರತೀಯನಿಗೂ ದೇಶವನ್ನು ರಕ್ಷಿಸುವ, ಪ್ರಾಕೃತಿಕ ವಿಪತ್ತಿನ ವೇಳೆ ಮಾನವೀಯ ಕಾರ್ಯಕ್ಕೆ ಸದಾ ಧುಮುಕುವ ತನ್ನ ಸೇನೆಯ ಬಗ್ಗೆ ಅಪಾರ ಗೌರವ, ನಂಬಿಕೆಯಿದೆ’ ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
‘ಸೇನೆಗೆ ದೇಶವೇ ಮೊದಲು, ದೇಶಕ್ಕಾಗಿ ಪ್ರಾಣ ಸಮರ್ಪಣೆ ಮಾಡಿದ ಪ್ರತಿಯೊಬ್ಬ ಸೈನಿಕನಿಗೂ ನನ್ನ ಸೆಲ್ಯೂಟ್. ದೇಶ ತನ್ನ ವೀರ ಸೈನಿಕನನ್ನು ಎಂದಿಗೂ ಮರೆಯಲಾರದು’ ಎಂದಿದ್ದಾರೆ.
On Army Day, I convey greetings to the soldiers, veterans and their families. Every citizen of India has unwavering trust and pride in our Army, which protects the nation and is also at the forefront of humanitarian efforts during times of natural disasters and other accidents.
— Narendra Modi (@narendramodi) January 15, 2018
Our Army always puts the nation first. I salute all those great individuals who sacrificed their lives while serving the nation. India will never forget our valiant heroes.
— Narendra Modi (@narendramodi) January 15, 2018
ರಾಷ್ಟ್ರಪತಿಗಳು ಟ್ವಿಟ್ ಮಾಡಿ, ‘ಸೇನಾದಿನದ ಅಂಗವಾಗಿ ಸೇನೆಯಲ್ಲಿನ ಎಲ್ಲಾ ಪುರುಷರಿಗೆ, ಮಹಿಳೆಯರಿಗೆ, ಅವರ ಕುಟುಂಬಿಕರಿಗೆ ನನ್ನ ವಂದನೆಗಳು. ನೀವು ನಮ್ಮ ಹೆಮ್ಮೆ, ನಮ್ಮ ಸ್ವಾತಂತ್ರ್ಯದ ರಕ್ಷಕರು. ನೀವು ಎಚ್ಚರವಿದ್ದೀರಿ ಎಂಬ ನಂಬಿಕೆಯಿಂದಲೇ ನಾಗರಿಕರು ಮಲಗುತ್ತಾರೆ’ ಎಂದಿದ್ದಾರೆ.
On Army Day, greetings to the valiant men and women of the Indian Army, to veterans and to families of those who have worn the uniform. You are our nation’s pride, the sentinels of our liberty. Citizens sleep securely knowing you are ever awake and ever vigilant #PresidentKovind
— President of India (@rashtrapatibhvn) January 15, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.