ನವದೆಹಲಿ: ಒಂದು ವೇಳೆ ಹೊಸ ಗ್ರಾಹಕ ರಕ್ಷಣಾ ಮಸೂದೆ ಸಂತ್ತಿನಲ್ಲಿ ಮಂಡನೆಗೊಂಡರೆ ದಾರಿ ತಪ್ಪಿಸುವ ಜಾಹೀರಾತುಗಳಲ್ಲಿ ನಟಿಸುವ ಸೆಲೆಬ್ರಿಟಿಗಳು ಸೆರೆವಾಸದ ಬದಲು ರೂ.50 ಲಕ್ಷದವರೆಗೆ ದಂಡ ಕಟ್ಟಬೇಕಾಗುತ್ತದೆ.
ಗ್ರಾಹಕ ರಕ್ಷಣಾ ಮಸೂದೆ 2018ನ್ನು ಗ್ರಾಹಕರ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಲೋಕಸಭೆಗೆ ಪರಿಚಯಿಸಿದ್ದಾರೆ. ಈ ಮಸೂದೆ 31 ವರ್ಷ ಹಳೆಯ ಕಾನೂನನ್ನು ಬದಲಾಯಿಸಲಿದೆ.
ದಾರಿ ತಪ್ಪಿಸುವ ಜಾಹೀರಾತುಗಳನ್ನು ತಡೆಗಟ್ಟುವುದೇ ಈ ಮಸೂದೆಯ ಪ್ರಮುಖ ಅಂಶವಾಗಿದೆ. ಇಂತಹ ಜಾಹೀರಾತುಗಳ ವಿರುದ್ಧ ಮೊದಲು ರೂ.10 ಲಕ್ಷದವರೆಗೆ ಮತ್ತೆ ರೂ.50 ಲಕ್ಷದವರೆಗೂ ದಂಡ ವಿಧಿಸುವ ಅವಕಾಶ ಇದರಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.