ನವದೆಹಲಿ: 1993ರಲ್ಲಿ ಚೆನ್ನೈನ ಆರ್ಎಸ್ಎಸ್ ಕೇಂದ್ರ ಕಛೇರಿಯ ಮೇಲೆ ಬಾಂಬ್ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ ತಮಿಳುನಾಡಿನ ನಿಷೇಧಿತ ಉಲ್-ಉಮ್ಮಾ ಉಗ್ರ ಸಂಘಟನೆಯ ಸದಸ್ಯನಾಗಿದ್ದಾನೆ.
56 ವರ್ಷದ ಮುಸ್ತಕ್ ಅಹ್ಮದ್ನನ್ನು ಚೆನ್ನೈನ ಹೊರವಲಯದಿಂದ ಶುಕ್ರವಾರ ಬಂಧನಕ್ಕೊಳಪಡಿಸಲಾಗಿದೆ.
ಸ್ಫೋಟ ನಡೆದ ಬಳಿಕ ಈತನ ಬಂಧನಕ್ಕೆ ಜಾಲ ಬೀಸಲಾಗಿತ್ತು, ಅಲ್ಲದೇ ಈತನ ಬಗ್ಗೆ ಮಾಹಿತಿ ಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ಬಾಂಬ್ ದಾಳಿ ನಡೆಸಿದವರಿಗೆ ತಂಗಲು ವ್ಯವಸ್ಥೆ ಮಾಡಿಕೊಟ್ಟ ಮತ್ತು ಆರ್ಡಿಎಕ್ಸ್ ಪೂರೈಸಿದ ಆರೋಪ ಈತನ ಮೇಲಿದೆ.
ಆರ್ಎಸ್ಎಸ್ ಕಛೇರಿ ಮೇಲೆ ನಡೆದ ದಾಳಿಯಲ್ಲಿ 11 ಮಂದಿ ಅಸುನೀಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.