ನಮ್ಮ ರಾಜ್ಯದ ಜಿಲ್ಲೆಯ ದುರಂತ ನೋಡಿ, ಮೊದಲು ಮೇಯಲು ಬಿಟ್ಟ ದನಗಳಿಗೆ ರಕ್ಷಣೆ ಇರಲಿಲ್ಲ, ಆಮೇಲೆ ಹಟ್ಟಿಯಲ್ಲಿ ಇರುವ ದನಗಳಿಗೂ ರಕ್ಷಣೆ ಇಲ್ಲವಾಯಿತು. ಕಾಲೇಜಿಗೂ ಹೋದ ಹಿಂದು ಹೆಣ್ಣು ಮಕ್ಕಳಿಗೂ ರಕ್ಷಣೆ ಇಲ್ಲ, ಕೆಲಸಕ್ಕೆ ಹೋಗುವ ಹಿಂದು ಯುವಕರಿಗೆ ಮೊದಲೇ ರಕ್ಷಣೆ ಇಲ್ಲ… ಈಗ ಅಸ್ಪತ್ರೆಯಲ್ಲಿದ್ದ ಮೃತ ಶರೀರಕ್ಕೂ ರಕ್ಷಣೆ ಇಲ್ಲದಂತಾಗಿ ಹೋಯಿತು… ನಿಜಕ್ಕೂ ನಮ್ಮ ರಾಜ್ಯದಲ್ಲಿ ಯಾರಿಗಿದೆ ? ಯಾವುದಕ್ಕೆ ಇದೆ ರಕ್ಷಣೆ ?
ಇಲ್ಲಿಯವರೆಗೆ 21 ಕೊಲೆಗಳಾದವು. ಆ ತಾಯಿಯ ತಂದೆಯ, ಕುಟುಂಬಸ್ಥರ ನೋವು ಮರೆಮಾಚಲಾಗದಂತಹದ್ದು. ಅವರ ನೋವನ್ನು ಯಾರಿಂದಲೂ ಸಮಾಧಾನಪಡಿಸಲು ಸಾಧ್ಯವಿಲ್ಲ. ಇದನ್ನು ನೋಡಿ ಅನೇಕ ಹಿಂದುಗಳಿಗೆ ಮನೆಯಿಂದ ಆಚೆ ಬರಲು ಹೆದರುವ ಪರಿಸ್ಥಿತಿ. ಕಳೆದ ಮೂರು ವರ್ಷದಲ್ಲಿ ೨೦ಕ್ಕಿಂತ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದು ಈಗಿರುವ ರಾಜ್ಯ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಪೊಲೀಸರಿಗೂ ಮುಕ್ತವಾಗಿ ತನಿಖೆ ಮಾಡಲು ಸಾಧ್ಯವಾಗುತ್ತಿಲ್ಲ. ಆರೋಪಿಗಳನ್ನು ವಶಕ್ಕೆ ಪಡೆಯಲು ಹೋದ ಪೊಲೀಸರ ಮೇಲೆಯೂ ಮಾರಣಾಂತಿಕವಾದ ದಾಳಿಯಾಗುತ್ತದೆ. ವರದಿಯನ್ನು ತಮಗೆ ಬೇಕಾದ ಹಾಗೆ ತಿರುಚಲಾಗುವುದು. ಹೌದು ಈ ರಿತಿ ಆಗುತ್ತಿರುವುದು ಬೇರೆಲ್ಲಿಯೂ ಅಲ್ಲ ನಮ್ಮ ಕರ್ನಾಟಕದಲ್ಲಿಯೇ.
ಎಲ್ಲೆಂದಿಲೋ ಮತಾಂಧರು ಬರುತ್ತಾರೆ ನಮ್ಮ ಅಮಾಯಕ ಹಿಂದುಗಳ ಮೇಲೆ ಹಲ್ಲೆ ಮಾಡಿ ಓಡಿ ಹೋಗುತ್ತಾರೆ. ನಮ್ಮ ಸರ್ಕಾರದ ನಾಯಕರು ತಲೆ ಕೆಡಿಸಿಕೊಳ್ಳುವುದಿಲ್ಲ. ಮಡಿಕೇರಿಯ ಕುಟ್ಟಪ್ಪನವರ ಹತ್ಯೆ ಇರಬಹುದು, ಪ್ರಶಾಂತ್ ಪೂಜಾರಿ ಹತ್ಯೆ ಇರಬಹುದು ರುದ್ರೇಶ್ ಅವರ ಕೊಲೆ ಇರಬಹುದು, ನಿನ್ನೆ ನಡೆದ ದೀಪಕ್ ಹತ್ಯೆ ಆಗಲಿ ಬಹುತೇಕ ಹತ್ಯೆಗಳಲ್ಲಿ ನೇರ ಆರೋಪ ಇರುವುದು ಪಿ.ಎಫ್.ಐ. ನವರದ್ದೇ. ಆದರೆ, ಇಲ್ಲಿಯವರೆಗೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಅವರನ್ನು ಅರೆಸ್ಟ್ ಮಾಡಿದರೂ ಎರಡೇ ದಿನದಲ್ಲಿ ಅವರು ಆಚೆ ಇರುತ್ತಾರೆ. ಒಬ್ಬ ಕೊಲೆ ಮಾಡಿದವ ಯಾವುದೇ ಶಿಕ್ಷೆ ಅನುಭವಿಸದೇ ಜೈಲಿನಿಂದ ಹೊರಗೆ ಬರುತ್ತಾನೆ. ವಯಸ್ಸಿಗೆ ಬಂದ ಮಗ ಬೀದಿಯಲ್ಲಿ ಹೆಣವಾಗಿ ಬಿದ್ದಿರುತ್ತಾನೆ, ವಯಸ್ಸಿಗೆ ಬಂದಿರುವ ಹುಡುಗಿ ಯಾವುದೋ ಕೋಮಿನವರ ಜೊತೆ ಓಡಿಹೋಗುತ್ತಾಳೆ ಅಮಾಯಕ ಹುಡುಗರು ಡ್ರಗ್ಸ್ ಸೇವಿಸುತ್ತಾ ಬೇಡದ ತಲೆ ಹಿಡುಕ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಹೀಗಿರುವಾಗ ಪರಾಕ್ರಮವಲ್ಲದೇ ಇನ್ನೇನು ಮಾಡಬೇಕು ಹಿಂದುಗಳು. ಒಂದು ಕಡೆ ಬಹುಸಂಖ್ಯಾತರಾದರೂ ಅಲ್ಪ ಸಂಖ್ಯಾತರ ದಬ್ಬಾಳಿಕೆ ಇನ್ನೊಂದು ಕಡೆ. ಸರ್ಕಾರದ ವೈಫಲ್ಯ, ಇಂತಹ ದುರ್ಬಲ ಪರಿಸ್ಥಿತಿ ಹಿಂದುಗಳ ಮುಂದಿರುವಾಗ ಹಿಂದುಗಳು ಪ್ರತಿಭಟನೆ ಮಾಡದೆ ಇನ್ನೇನು ಮಾಡಲು ಸಾಧ್ಯ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎನ್ನುವ ರೀತಿಯಲ್ಲಿ ಇಲ್ಲಿನ ರಾಜ್ಯ ಸರ್ಕಾರ ವರ್ತಿಸುತ್ತಿದೆ.
ಅಷ್ಟಕ್ಕೂ ಮೃತರಾಗಿರುವ ಹಿಂದುಗಳು ಮಾಡಿದ ತಪ್ಪಾದರೂ ಏನು? ಅವರು ಹಿಂದುವಾಗಿದ್ದೇ ತಪ್ಪೇ? ತಮ್ಮ ಧರ್ಮದ ರಕ್ಷಣೆಯ ಕೆಲಸ ಮಾಡಿದ್ದೇ ತಪ್ಪೇ? ಇದಕ್ಕೆ ಪ್ರಾಯಶಃ ಯಾರಿಂದಲೂ ಉತ್ತರ ಕೂಡ ನೀಡಲು ಸಾಧ್ಯವಾಗಲಾರದು. ಹಾಗಾಗಿಯೇ ಹಿಂದುಗಳು ಇನ್ನು ಕುಂಭಕರ್ಣನ ನಿದ್ದೆ ಮಾಡಿದ್ದು ಸಾಕು ಜಾಗೃತರಾಗೋಣ. ನಾವು ಹಿಂದುಗಳು ನಮ್ಮ ಧರ್ಮದ ರಕ್ಷಣೆಗೆ, ನಮ್ಮ ಸಹೋದರಿಯರ ಮಾನ ಕಾಪಾಡಲು, ನಮ್ಮ ಗೋಮಾತೆಯ ರಕ್ಷಿಸಲು, ನಮ್ಮ ಜೀವಕ್ಕೂ ಬೆಲೆಯಿದೆ ಎಂದು ತೋರಿಸಿಕೊಡಲು ಸಿದ್ದರಾಗಿ ಎದ್ದುನಿಲ್ಲಬೇಕಾಗಿದೆ. ಇನ್ನಾದರೂ ಜಾಗೃತರಾಗೋಣ.
ಧರ್ಮೋರಕ್ಷತಿರಕ್ಷಿತಃ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.