ಹೈದರಾಬಾದ್: ತೆಲಂಗಾಣ ವಿಧಾನಪರಿಷತ್ ಚುನಾವಣೆಯ ವೇಳೆ ಟಿಡಿಪಿ ಪರವಾಗಿ ಮತಹಾಕುವಂತೆ ಲಂಚದ ಆಮಿಷವೊಡ್ಡಿದ ಟಿಡಿಪಿ ಶಾಸಕ ರೇವಂತ್ ರೆಡ್ಡಿಯವರನ್ನು ಭಾನುವಾರ ಬಂಧನಕ್ಕೊಳಪಡಿಸಲಾಗಿದೆ.
ಅಲ್ಲದೇ ಪ್ರಕರಣದ ಸಂಬಂಧ ಆರೋಪಿಗಳಾದ ಬಿಷಪ್ ಹಾರಿ ಸಬಸ್ಟಿಯನ್ ಮತ್ತು ಉದಯ್ ಸಿಂಹ ಅವರನ್ನು ಬಂಧಿಸಲಾಗಿದೆ.
ತೆಲಂಗಾಣ ಅಸೆಂಬ್ಲಿಯಲ್ಲಿ ಆಂಗ್ಲೋ ಇಂಡಿಯನ್ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಎಲ್ವೀಸ್ ಸ್ಟೀಫನ್ಸನ್ ಎಂಬುವವ ದೂರಿನ ಮೇರೆಗೆ ರೆಡ್ಡಿಯನ್ನು ಬಂಧಿಸಲಾಗಿದೆ.
ಎಲ್ವೀಸ್ ಅವರಿಗೆ ಟಿಡಿಪಿ ಪರ ಮತ ಹಾಕುವಂತೆ ಅಥವಾ ಮತದಾನದ ವೇಳೆ ದೇಶ ಬಿಟ್ಟು ತೆರಳುವಂತೆ ಮನವಿ ಮಾಡಿ 5 ಕೋಟಿ ರೂಪಾಯಿಯ ಆಮಿಷವನ್ನು ರೆಡ್ಡಿ ಒಡ್ಡಿದ್ದರು. ಈ ಬಗ್ಗೆ ಎಲ್ವೀಸ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ತಿಳಿಸಿದ್ದರು.
ಮೊದಲೇ ನಿರ್ಧರಿಸಿದಂತೆ ರೆಡ್ಡಿ ಲಂಚದ ಹಣ ಹಿಡಿದು ಎಲ್ವೀಸ್ ಅವರ ನಿವಾಸಕ್ಕೆ ಆಗಮಿಸಿದ್ದಾರೆ, ಲಂಚವನ್ನು ನೀಡುವ ವೇಳೆ ಹಣ ಸಮೇತ ಭ್ರಷ್ಟಾಚಾರ ನಿಗ್ರಹ ದಳದವರು ರೆಡ್ಡಿಯವರನ್ನು ರೆಡ್ಹ್ಯಾಂಡಾಗಿ ಹಿಡಿದಿದ್ದಾರೆ. ಈ ದೃಶ್ಯದ ವಿಡಿಯೋ ಚಿತ್ರೀಕರಣ ಕೂಡ ಮಾಡಲಾಗಿದೆ.
ರೇವಂತ್ ರೆಡ್ಡಿಯನ್ನು ಬಂಧಿಸಲಾಗಿದ್ದು, ಅವರಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ. ಆದರೂ ಸೋಮವಾರ ನಡೆದ ವಿಧಾನಪರಿಷತ್ ಚುನಾವಣೆಗೆ ಅವರಿಗೆ ಮತದಾನ ಮಾಡುವ ಅವಕಾಶವನ್ನು ನೀಡಲಾಗಿದೆ.
ಲಂಚದ ಆರೋಪವನ್ನು ಅಲ್ಲಗೆಳೆದಿರುವ ರೆಡ್ಡಿ, ಇದು ಆಡಳಿತ ಪಕ್ಷ ಟಿಆರ್ಎಸ್ನ ಕುತಂತ್ರ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.