ರಾಯ್ಪುರ: ಒಂಭತ್ತನೇ ತರಗತಿಯ ಬಳಿಕವೂ ಮದರಸಗಳಲ್ಲಿ ಶಾಲಾ ಪಠ್ಯಕ್ರಮ ವಿಷಯಗಳನ್ನು ಬೋಧಿಸಲು ಛತ್ತೀಸ್ಗಢ ನಿರ್ಧರಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೊಳ್ಳಲಿದೆ.
ಮದರಸಗಳಲ್ಲಿ ಕೇವಲ ಧಾರ್ಮಿಕ ಶಿಕ್ಷಣ ಮಾತ್ರವಲ್ಲದೇ ಔಪಚಾರಿಕ ಶಿಕ್ಷಣದ ವಿಷಯಗಳನ್ನೂ ಕಲಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಇಲ್ಲಿ ಇಂಗ್ಲೀಷ್, ಗಣಿತ, ವಿಜ್ಞಾನ ವಿಷಯಗಳನ್ನು ಕಲಿಸಲಾಗುತ್ತದೆ.
ಪಶ್ಚಿಮಬಂಗಾಳದ ಬಳಿಕ ಹೈಸ್ಕೂಲ್ ಮತ್ತು ಅದಕ್ಕೂ ಮೇಲ್ಪಟ್ಟ ಶಿಕ್ಷಣವನ್ನು ಮದರಸಗಳಲ್ಲಿ ನೀಡುತ್ತಿರುವ ರಾಜ್ಯ ಛತ್ತೀಸ್ಗಢವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.