ನವದೆಹಲಿ: ಚೀನಾದೊಂದಿಗಿನ ವಾಸ್ತವ ಗಡಿ ರೇಖೆಯುದ್ದಕ್ಕೂ ಹವಮಾನ ಸಂಪರ್ಕವನ್ನು ಸದೃಢಗೊಳಿಸುವ ಸಲುವಾಗಿ ಭಾರತ ಹೆಚ್ಚುವರಿಯಾಗಿ 17 ಸುರಂಗಗಳನ್ನು ನಿರ್ಮಿಸಲು ನಿರ್ಧರಿಸಿದೆ.
ಪ್ರಸ್ತುತ ಹಮ್ಮಿಕೊಂಡಿರುವ ಮಹತ್ವದ ಇಂಡಿಯಾ-ಚೀನಾ ಬಾರ್ಡರ್ ರೋಡ್ಸ್(ಐಸಿಬಿಆರ್) ಕಾರ್ಯದಲ್ಲಿ ಹೆಚ್ಚುವರಿಯಾಗಿ ಈ 17 ಸುರಂಗವನ್ನು ನಿರ್ಮಾಣ ಮಾಡಲಾಗುತ್ತಿದೆ.
ಅತೀಯಾದ ಹಿಮಪಾತದಂತಹ ಪ್ರತಿಕೂಲ ಸಂದರ್ಭದಲ್ಲೂ ಸೈನಿಕ ಸರಂಜಾಮುಗಳ ಪೂರೈಕೆಗೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸುರಂಗಗಳಿಂದ ವಾಹನಗಳ ಕಾರ್ಯಾಚರಿಸುವ ದರ ಕುಗ್ಗಲಿದೆ, ಸೂಕ್ಷ್ಮ ಪ್ರದೇಶದಲ್ಲೂ ಸೈನಿಕರ ನಿಯೋಜನೆಗೆ ಅನುವು ಮಾಡಿಕೊಡಲಿದೆ ಎಂದು ಅಭಿಪ್ರಾಯಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.