ನವದೆಹಲಿ: ಸ್ಪ್ಯಾನಿಶ್ ಬಳಿಕ ಅಮೆರಿಕಾ ವೈದ್ಯರು ಮಾತನಾಡುವ ಇಂಗ್ಲೀಷೇತರ ಭಾಷೆಗಳ ಪಟ್ಟಿಯಲ್ಲಿ ಹಿಂದಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಶೇ.13.8ರಷ್ಟು ಅಮೆರಿಕನ್ ವೈದ್ಯರು ಹಿಂದಿ ಮಾತನಾಡುತ್ತಾರೆ. ಶೇ.36.2ರಷ್ಟು ವೈದ್ಯರು ಸ್ಪ್ಯಾನಿಶ್ ಮಾತನಾಡುತ್ತಾರೆ.
ಅಮೆರಿಕಾದ ಅತೀದೊಡ್ಡ ಮೆಡಿಕಲ್ ಸೋಶಲ್ ನೆಟ್ವರ್ಕ್ ಡಾಕ್ಸಿಮಿಟಿ ಈ ಬಗೆಗಿನ ವರದಿಯನ್ನು ಬಿಡುಗಡೆಗೊಳಿಸಿದೆ. 60 ಸಾವಿರ ಲೈಸೆನ್ಸ್ ಹೊಂದಿದ ವೈದ್ಯರ ಪ್ರೊಫೈಲ್ನ್ನು ಇದು ಬಿಡುಗಡೆ ಮಾಡಿದೆ.
ಶೇ.8.8ರಷ್ಟು ವೈದ್ಯರು ಫ್ರೆಂಚ್, ಶೇ.7.6ರಷ್ಟು ವೈದ್ಯರು ಪರ್ಶಿಯನ್, ಶೇ.5.2ರಷ್ಟು ವೈದ್ಯರು ಚೀನಿ ಭಾಷೆ ತಿಳಿದವರಾಗಿದ್ದಾರೆ.
ಯುಎಸ್ನಲ್ಲಿ 950,000 ವೈದ್ಯರು ಇದ್ದಾರೆ ಎಂದು ಅಂದಾಜಿಸಲಾಗಿದ್ದು, ಇವರಲ್ಲಿ 100,000 ಮಂದಿ ಭಾರತೀಯರು ಎನ್ನಲಾಗಿದೆ. ಇವರಲ್ಲಿ 70 ಸಾವಿರ ಮಂದಿ ಭಾರತದಲ್ಲೇ ವೈದ್ಯಕೀಯ ತರಬೇತಿ ಪಡೆದು ಅಮೆರಿಕಾಗೆ ವಲಸೆ ಹೋದವರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.