ಮುಂಬಯಿ: ಬಾಯ್ ದೂಜಾದ ಹಿನ್ನಲೆಯಲ್ಲಿ ಲೆಜೆಂಡರಿ ಗಾಯಕಿ ಲತಾ ಮಂಗೇಶ್ಕರ್ ಅವರು ವಿಶೇಷ ವಿಡಿಯೋವೊಂದರಲ್ಲಿ ಯೋಧರಿಗೆ ಭಾವಪೂರ್ಣ ಸಂದೇಶವನ್ನು ನೀಡಿದ್ದಾರೆ.
‘ಭಾರತೀಯ ಸೇನೆ ಯೋಧರಿಗೆ ನನ್ನ ಸೆಲ್ಯೂಟ್. ನಾನೂ ನಿಮ್ಮ ಒರ್ವ ಸಹೋದರಿ, ನಿಮ್ಮ ನಿಜವಾಗಿಯೂ ಗೌರವಿಸುತ್ತೇನೆ. ಭಾರತ ತನ್ನ ಯೋಧರಿಂದಾಗಿ ಇದೆ ಮತ್ತು ಭಾರತದಿಂದಾಗಿ ನಾವಿದ್ದೇವೆ ಎಂಬುದು ನಿಜ’ ಎಂದು ಲತಾ ಹೇಳಿದ್ದಾರೆ.
ದೇಶಭಕ್ತಿಯನ್ನು ಸ್ಪುರಣಗೊಳಿಸುವಂತಹ ಗೀತೆಗಳನ್ನು ಹಾಡಿರುವ ಅವರು, ಯೋಧರಿಗಾಗಿ ಏನನ್ನು ಮಾಡಲೂ ಸದಾ ಸಿದ್ಧ ಎಂದಿದ್ದಾರೆ.
ತನ್ನ ಜನ್ಮದಿನವನ್ನು ಗಡಿಯಲ್ಲಿ ಕಾವಲು ಕಾಯುತ್ತಿರುವ ಯೋಧರರನ್ನು ಸ್ಮರಿಸಿ, ಅವರಿಗೆ ಉಡುಗೊರೆ ನೀಡುವ ಮೂಲಕ ಆಚರಿಸಿ ಎಂದು ಅವರು ಈ ಹಿಂದೆ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.