ನವದೆಹಲಿ: ಮಾಂಚೆಸ್ಟರ್ ಯುನೈಟೆಡ್ನ ಸ್ಟಾರ್ ಆಟಗಾರ ಜುವಾನ್ ಮಾತಾ ಮುಂಬಯಿ ಬಾಲಕರ ಕನಸನ್ನು ನನಸುಗೊಳಿಸಿದ್ದಾರೆ. ಓಲ್ಡ್ ಟ್ರಾಫರ್ಡ್ಗೆ ಅವರನ್ನು ಬರಮಾಡಿಕೊಂಡಿದ್ದಾರೆ.
ಆಸ್ಕರ್ ಫೌಂಡೇಶನ್ ಭಾಗವಾಗಿರುವ ಮಾತಾ, ಈ ವರ್ಷದ ಆರಂಭದಲ್ಲಿ ಮುಂಬಯಿಯ ಸ್ಲಂವೊಂದಕ್ಕೆ ಭೇಟಿಕೊಟ್ಟಿದ್ದರು. ಬಡ ಮಕ್ಕಳಿಗೆ ಫುಟ್ಬಾಲ್ನಲ್ಲಿ ಸಹಾಯ ಮಾಡಬೇಕು ಎಂಬ ಚಾರಿಟಿಯ ಕಾರ್ಯನಿಮಿತ್ತ ಮುಂಬಯಿಗೆ ಅವರು ಆಗಮಿಸಿದ್ದರು.
ಇದೀಗ ಅವರ ಆಹ್ವಾನದ ಮೇರೆಗೆ ಇಂಗ್ಲೆಂಡ್ನ ಮಾಂಚೆಸ್ಟರ್ಗೆ ತೆರಳಿರುವ ಸ್ಲಂನ ತರುಣರ ತಂಡ ಅವರೊಂದಿಗೆ ಸುತ್ತಾಡಿದೆ. ಮಾತಾ ಈ ಬಾಲಕರಿಗೆ ಫುಟ್ಬಾಲ್ ಸ್ಟೇಡಿಯಂ ತೋರಿಸಿದ್ದು ಮಾತ್ರವಲ್ಲ, ಅವರಿಗೆ ಗೈಡೆಡ್ ಟೂರ್ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಬಯಿ ಮಕ್ಕಳೊಂದಿಗಿನ ಫೋಟೋವನ್ನು ಮಾತಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.