ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತಮ್ಮ ಮಾನವೀಯ ಕಾರ್ಯಗಳನ್ನು ಮುಂದುವರೆಸಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಎನಿಸಿರುವ ಪಾಕಿಸ್ಥಾನಿಯರಿಗೆ ಯಾವುದೇ ತಾರತಮ್ಯವನ್ನು ಮಾಡದೆ ವೈದ್ಯಕೀಯ ವೀಸಾ ನೀಡುತ್ತಿದ್ದಾರೆ. ಇದೀಗ ಅವರು ಭಾರತದಲ್ಲಿ ಲಿವರ್ ಟ್ರಾನ್ಸ್ಪ್ಲಾಂಟ್ ಬಯಸುತ್ತಿರುವ ಇಬ್ಬರು ಪಾಕ್ ರೋಗಿಗಳಿಗೆ ವೀಸಾ ದೊರಕಿಸಿಕೊಡುತ್ತಿದ್ದಾರೆ.
ನಸೀಮ್ ಅಖ್ತರ್ ಮತ್ತು ಶಬ್ಬೀರ್ ಅಹ್ಮದ್ ಶಾ ಎಂಬ ಪಾಕ್ ಪ್ರಜೆಗಳು ಲಿವರ್ ಸಮಸ್ಯೆಯಿಂದ ಬಳುತ್ತಿದ್ದು, ಭಾರತದಲ್ಲಿ ಚಿಕಿತ್ಸೆ ಪಡೆಯಲು ಬಯಸುತ್ತಿದ್ದಾರೆ. ಹೀಗಾಗೀ ಸ್ವರಾಜ್ ಅವರಿಗೆ ವೀಸಾ ದೊರಕಿಸಿಕೊಡಲು ಮನವಿ ಮಾಡಿಕೊಂಡಿದ್ದರು.
ಈಗಾಗಲೇ ಸುಷ್ಮಾ ಅವರು ಇಸ್ಲಾಮಾಬಾದ್ನಲ್ಲಿನ ಭಾರತೀಯ ಹೈಕಮಿಷನರ್ಗೆ ವಿಷಯ ತಲುಪಿಸಿದ್ದು, ಮೆಡಿಕಲ್ ವೀಸಾ ನೀಡುವಂತೆ ಕೋರಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.