ನವದೆಹಲಿ: ಹೆಣ್ಣುಮಕ್ಕಳ ಹಕ್ಕಿನ ಬಗ್ಗೆ ಪ್ರತಿಪಾದನೆ ಮಾಡಿರುವ ಕ್ರಿಕೆಟ್ ಲಜೆಂಡ್ ಸಚಿನ್ ತೆಂಡೂಲ್ಕರ್ ಅವರು, ಮಗಳಂದಿರ ಕನಸುಗಳನ್ನು ಪೋಷಿಸುವ ಸಲುವಾಗಿ ಅವರನ್ನು ಫೀಲ್ಡ್ನಲ್ಲಿ ಆಡಲು ಬಿಡುವಂತೆ ಎಲ್ಲಾ ಪೋಷಕರಿಗೂ ಕರೆ ನೀಡಿದ್ದಾರೆ.
ಯುನೆಸೆಫ್ ಗುಡ್ವಿಲ್ ಅಂಬಾಸಿಡರ್ ಆಗಿರುವ ತೆಂಡೂಲಕ್ಕರ್, ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ಪೋಷಕರು ಮತ್ತು ಸಮುದಾಯಗಳು ತಮ್ಮ ಹೆಣ್ಣು ಮಕ್ಕಳನ್ನು ಆಸ್ತಿಯೆಂದು ಪರಿಗಣಿಸಬೇಕು. ಅವರಿಗೆ ತಮ್ಮ ಸ್ವಂತ ಕಾಲಲ್ಲಿ ನಿಲ್ಲುವ ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಶಕ್ತಿಯಿದೆ ಎಂಬುದನ್ನು ಅರಿತುಕೊಳ್ಳಬೇಕು. ಅವರನ್ನು ಮದುವೆ ಮಾಡಿಕೊಡಬೇಕಾದ ಕೊರೆ ಎಂದು ಭಾವಿಸಬಾರದು’ ಎಂದಿದ್ದಾರೆ.
‘ಮಗಳ ಮೇಲೆ ನಾವು ಹೂಡಿಕೆ ಮಾಡಬೇಕು. ಭಾರತ ಸರ್ಕಾರ ಅದನ್ನು ಮಾಡುತ್ತಿದೆ, ಮಗಳ ಶಿಕ್ಷಣ ವೆಚ್ಚ ಕಡಿಮೆ ಮಾಡುವ ಸಲುವಾಗಿ ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.