ಮಂಗಳೂರು : ಹಿಂದು ಜಾಗರಣ ವೇದಿಕೆ ಮತ್ತು ವಿಶ್ವ ಹಿಂದು ಪರಿಷತ್ ವತಿಯಿಂದ ಪ್ರತಿಭಟನೆ ಹಾಗೂ ಖಂಡನಾ ಸಭೆಯು ಕದ್ರಿ ಸರ್ಕೂಟ್ ಹೌಸ್ ಎದುರುಗಡೆ ಇಂದು (ಅ. 11) ನಡೆಯಿತು.
ಕರಾವಳಿ ಜಿಲ್ಲೆಗಳಲ್ಲಿ ಹಾಗೂ ರಾಜ್ಯದ ಹಲವೆಡೆಗಳಲ್ಲಿ ಹಿಂದು ಚಳುವಳಿಯನ್ನು ಹತ್ತಿಕ್ಕುವ, ಹಿಂದು ನಾಯಕರ ಮೇಲೆ ದಬ್ಬಾಳಿಕೆಯನ್ನು ನಡೆಸುವ, ಹಿಂದು ಸಾಮಾಜಿಕ ಕಾರ್ಯಕರ್ತರ ಮೇಲೆ ನಿರಂತರ ದೌರ್ಜನ್ಯ, ಕಿರುಕುಳವನ್ನು ಎಸಗುವ, ಹಿಂದು ಧಾರ್ಮಿಕ, ಸಾಮಾಜಿಕ ಆಚರಣೆಗಳಿಗೆ ನೀತಿ-ನಿರ್ಬಂಧಗಳನ್ನು ಹೇರಿ ಅಡೆ-ತಡೆಗಳನ್ನು ಒಡ್ಡುವ ಹಿಂದು ವಿರೋಧಿ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಮಂಗಳೂರು ನಗರ ಪಾಲಿಕೆ ಸದಸ್ಯೆ ರೂಪ ಡಿ.ಬಂಗೇರ, ಹಿಂಜಾವೇ ಜಿಲ್ಲಾ ಸಂಚಾಲಕ ಅಮಿತ್ ಕುಮಾರ್, ಜಿಲ್ಲಾ ಸಹ ಸಂಚಾಲಕ ಸಂದೀಪ್ ಅಂಬ್ಲಮೊಗರು, ಕದ್ರಿನಗರ ಸಂಚಾಲಕ ಹರೀಶ್ ಜೋಗಿ ಮಠ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.