ಬೆಂಗಳೂರು: ಕೇರಳದಲ್ಲಿ ನಿರಂತರವಾಗಿ ನಡೆಯುತ್ತಿರುವ ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆಯನ್ನು ಖಂಡಿಸಿ ಸೋಮವಾರ ಬೆಂಗಳೂರಿನಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ ’ಜನರಕ್ಷಾ ಯಾತ್ರೆ’ಯನ್ನು ನಡೆಸಿತು.
ಲಾಲ್ಬಾಗ್ನಿಂದ ಸಿಪಿಎಂ ಕಛೇರಿಯವರೆಗೆ ಬಿಜೆಪಿ ಮುಖಂಡರಗಳು, ಕಾರ್ಯಕರ್ತರು ಪಾದಯಾತ್ರೆಯನ್ನು ನಡೆಸಿದರು.
ಸಿಪಿಎಂ ಗೂಂಡಾಗಳಿಂದ 5 ದಶಕದಲ್ಲಿ ಮೂನ್ನೂರು ಹತ್ಯೆಗಳಾಗಿವೆ ಎಂದು ಆರೋಪಿಸಿರುವ ಬಿಜೆಪಿ, ಇದರ ವಿರುದ್ಧ ‘ಜನರಕ್ಷಾ ಯಾತ್ರೆ’ ಹಮ್ಮಿಕೊಂಡಿದೆ. ಮಾಜಿ ಸಿಎಂ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಆರ್.ಅಶೋಕ್, ಸಿ.ಟಿ.ರವಿ ಇದರಲ್ಲಿ ಭಾಗಿಯಾಗಿದ್ದರು.
ಕೇರಳದಲ್ಲಿ ಅ.3 ರಿಂದ 17ರವರೆಗೆ ‘ಜನರಕ್ಷಾ ಯಾತ್ರೆ’ ನಡೆಯುತ್ತಿದೆ. ಇದಕ್ಕೆ ಬೆಂಬಲವಾಗಿ ದೇಶದಾದ್ಯಂತ ಬಿಜೆಪಿ ಯಾತ್ರೆಯನ್ನು ಆಯೋಜನೆ ಮಾಡುತ್ತಿದೆ.