ಮಂಗಳೂರು : ಯುವಾಬ್ರಿಗೇಡ್ ‘ಕಣ ಕಣದಲೂ ಶಿವ’ ಎಂಬ ಯೋಜನೆಯಡಿ ರಸ್ತೆ ಬದಿಯಲ್ಲಿ ಅರಳಿ ಕಟ್ಟೆಗಳ ಮೇಲೆ ಅನಾಥವಾಗಿರುವ ದೇವರ ಪಟಗಳಿಗೆ ಮುಕ್ತಿ ನೀಡುವ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಚಾಲನೆ ನೀಡಿದೆ.
ಆದಿತ್ಯವಾರ ಬೆಳಗ್ಗೆ ಮಂಗಳೂರು ನಗರದ ಹಲವು ಕಡೆ ರಸ್ತೆ ಬದಿಯಲ್ಲಿ, ಅರಳಿ ಕಟ್ಟೆಗಳ ಮೇಲೆ ಬಿದ್ದಿದ್ದ ಭಗ್ನಗೊಂಡಿದ್ದ ದೇವರ ಪಟ ಮತ್ತು ಮೂರ್ತಿಗಳನ್ನು ಸಂಗ್ರಹಿಸಲಾಗಿದೆ.
ಹೀಗೆ ಸಂಗ್ರಹಿಸಿದ ಪಟಗಳ ಗಾಜನನ್ನು ಪ್ರತ್ಯೇಕಿಸಿ ಮಣ್ಣಿನೊಂದಿಗೆ ಒಂದಾಗುವ ವಸ್ತುಗಳನ್ನು ಮಣ್ಣಿನಲ್ಲಿ ವ್ಯವಸ್ಥಿತವಾಗಿ ವಿಲೇವಾರಿ ಮಾಡಿ ಅವುಗಳ ಮೇಲೆ ಅರಳಿ ಮರವೊಂದನ್ನು ನೆಟ್ಟು ಪೋಷಿಸಲಾಗುವುದು ಎಂದು ಯುವಾಬ್ರಿಗೇಡ್ ಜಿಲ್ಲಾ ಸಂಚಾಲಕರಾದ ತಿಲಕ್ ಶಿಶಿಲ ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಆಸ್ತಿಕ ಬಾಂಧವರ ಸಹಕರ ಬಯಸಿರುವ ಯುವಾಬ್ರಿಗೇಡ್, ಸಾರ್ವಜನಿಕರ ಮನೆಗಳಲ್ಲಿ ಊನಗೊಂಡಿರುವ ದೇವರ ಪಟಗಳು ಇದ್ದರೆ ರಸ್ತೆಬದಿಯಲ್ಲಿ ಎಸೆಯುವ ಬದಲಾಗಿ ವ್ಯವಸ್ಥಿತವಾಗಿ ವಿಲೇವಾರಿಗಾಗಿ ಯುವಾಬ್ರಿಗೇಡ್ ಕಾರ್ಯಕರ್ತರಾದ ಶ್ರೀಪತಿಯವರನ್ನು 9741504463 ಸಂಪರ್ಕಿಸಿಬೇಕಾಗಿ ವಿನಂತಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.