ನವದೆಹಲಿ: ಲಿವರ್ ಕಸಿ ಅಗತ್ಯವಿರುವ ಪಾಕಿಸ್ಥಾನಿ ವ್ಯಕ್ತಿಗೆ ಮತ್ತು ಓಪನ್ ಹಾರ್ಟ್ ಸರ್ಜರಿಯ ಅಗತ್ಯವಿರುವ ಅದೇ ದೇಶದ ಮೂರು ವರ್ಷದ ಮಗುವಿಗೆ ಭಾರತದ ಮೆಡಿಕಲ್ ವೀಸಾವನ್ನು ಮಂಜೂರು ಮಾಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಪಾಕಿಸ್ಥಾನಿ ಉಝೈರ್ ಹುಮಾಯೂನ್ ಅವರು ತಮ್ಮ ಮಗಳಿಗೆ ಓಪನ್ ಹಾಟ್ ಸರ್ಜರಿಗೆ ಒಳಗಾಗಲು ಭಾರತದ ವೀಸಾ ನೀಡುವಂತೆ ಕೋರಿದ್ದರು. ಇದಕ್ಕೆ ಸುಷ್ಮಾ ಒಪ್ಪಿದ್ದಾರೆ.
ನೋರುಮ ಹಬೀಬ್ ಎಂಬ ಪಾಕಿಸ್ಥಾನಿ ಮಹಿಳೆ ತಮ್ಮ ತಂದೆಗೆ ಲಿವರ್ ಕಸಿ ಅಗತ್ಯವಿದ್ದು, ಚಿಕಿತ್ಸೆಗಾಗಿ ಭಾರತದ ವೀಸಾಗೆ ಮನವಿ ಮಾಡಿದ್ದರು. ಇದಕ್ಕೂ ಸುಷ್ಮಾ ಸಮ್ಮತಿ ನೀಡಿದ್ದಾರೆ.
ಉಭಯ ದೇಶಗಳ ನಡುವೆ ಶತ್ರುತ್ವವಿದ್ದರೂ ವಿದೇಶಾಂಗ ಸಚಿವೆ ಮಾನವೀಯ ನೆಲೆಯಲ್ಲಿ ಪಾಕ್ ನಾಗರಿಕರಿಗೆ ಭಾರತದ ಮೆಡಿಕಲ್ ವೀಸಾ ದೊರೆಯುವಂತೆ ನೋಡಿಕೊಳ್ಳುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.