ಬೆಳ್ತಂಗಡಿ : ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಶನಿವಾರ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕರಿಂದ ಬಂದ ದೂರಿನ ಹಿನ್ನಲೆಯಲ್ಲಿ ಅಲ್ಲಿನ ಕಾರ್ಯವೈಖರಿಯ ಬಗ್ಗೆ ಪರಿಶೀಲಿಸಿದರು.
ಮಧ್ಯಾಹ್ನ ಆಸ್ಪತ್ರೆಗೆ ಭೇಟಿ ನೀಡಿದಾಗ ವೈದ್ಯರುಗಳು, ಸಿಬ್ಬಂದಿಗಳು ಊಟಕ್ಕೆ ಹೋಗಿದ್ದರು. ಭೇಟಿ ನೀಡಿದ ಸಂದರ್ಭ ಕೆಲವೇ ಮಂದಿ ಸಿಬಂಧಿಗಳಿದ್ದರು.ಇದರಿಂದ ಗರಂ ಆದ ಸಚಿವರು ಹೊಸತಾಗಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಬೇಕಾದ ವ್ಯವಸ್ಥೆಗಳು ಇರುವ ಕಾರಣ ಜನಸಾಮಾನ್ಯರು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ.ಆಸ್ಪತ್ರೆಯಲ್ಲಿ ರೋಗಿಗಳು ಬಂದಾಗ ಅವರನ್ನು ವಿಚಾರಿಸಲು ಯಾರಾದರೂ ಒಬ್ಬರು ಇರಬೇಕು.
ಸಾಮಾನ್ಯ ಜನರು ಮಾತ್ರ ಬರುವಂತದ್ದು. ಅವರಿಗೆ ನಾವು ಸ್ಪಂದಿಸಬೇಕಾದರೆ ಇಲ್ಲಿ ಕರ್ತವ್ಯದಲ್ಲಿರುವುದು ಅಗತ್ಯ ಎಂದು ತಿಳಿ ಹೇಳಿದರು. ಇದೀಗ ತಾಲೂಕಿನಲ್ಲಿ ಡೆಂಗ್ಯೂನ ಬಗ್ಗೆ ವರದಿಗಳು ಬಂದಿದೆ.ಇಲಾಖೆ ಇದರ ಬಗ್ಗೆ ನಿಗಾ ವಹಿಸಬೇಕು.ಸೂಕ್ತ ಚಿಕಿತ್ಸೆಗಳನ್ನು ನೀಡಬೇಕು. ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ವೈದ್ಯರುಗಳಿಗೆ ಸೂಚಿಸಿದ ಅವರು ಬಳಿಕ ಇಲ್ಲಿನ ಶವಾಗಾರಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವಂತೆ ತಾಲೂಕು ವೈದ್ಯಾಧಿಕಾರಿಗಳಿಗೆ ಆದೇಶಿಸಿದರು.
ಶವಾಗಾರದ ದುರಸ್ತಿ ಕಾಮಗಾರಿ ಕಳಪೆ ಮಟ್ಟದಾಗಿದೆ. ಮಳೆಗಾಲದಲ್ಲಿ ಶವಾಗಾರದ ಒಳಗೆ ನೀರು ನಿಂತು ಶವಾಗಾರ ಕೆಲಸ ಕಾರ್ಯಕ್ಕೆ ಹಾಗು ವೈದ್ಯಾಧಿಕಾರಿಗಳಿಗೆ ತಮ್ಮಕರ್ತವ್ಯ ನಿರ್ವಹಣೆಗೆ ತೊಂದರೆಯಾಗುತ್ತಿದೆ.ಅಲ್ಲದೆ ಶವ ಇಡಲುಇಲ್ಲಿ ಫ್ರೀಜರ್ ವ್ಯವಸ್ಥೆ ಇರುವುದಿಲ್ಲ. ತಾಲೂಕುಕೇಂದ್ರವಾದ್ದರಿಂದ ಫ್ರೀಜರ್ನ ವ್ಯವಸ್ಥೆ ಮಾಡಿಕೊಡುವಂತೆ ಬೆಳ್ತಂಗಡಿಯ ಸಾಮಾಜಿಕ ಕಾರ್ಯಕರ್ತ ಅಬ್ದುಲ್ಜಲೀಲ್ ಅವರು ಮನವಿ ನೀಡಿದರು.
ಈ ಸಂದರ್ಭಕಾಂಗ್ರೇಸ್ ಗ್ರಾಮೀಣ ಬ್ಲಾಕ್ಅಧ್ಯಕ್ಷ ರಾಮಚಂದ್ರಗೌಡ, ಕಾಂಗ್ರೇಸ್ಅಲ್ಪಸಂಖ್ಯಾತ ಘಟಕದ ಜಿಲ್ಲಾ ಸಂ. ಕಾರ್ಯದರ್ಶಿ ಅಬ್ದುಲ್ ಶುಕೂರ್, ಮಡಂತ್ಯಾರು ಗ್ರಾಪಂ ಸದಸ್ಯ ರಾಜಶೇಖರ ಶೆಟ್ಟಿ, ತಾಲೂಕು ವೈದ್ಯಾಧಿಕಾರಿ ಡಾ| ಕಲಾಮಧು, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಆದಂ, ಆಸ್ಪತ್ರೆಯ ವೈದ್ಯರುಗಳು, ಸಿಬ್ಬಂದಿಗಳು ಮೊದಲಾದವರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.