ನವದೆಹಲಿ: ಕೇಂದ್ರ ಸಂಸ್ಕೃತಿ ಸಚಿವ ಅಲ್ಫೋನ್ಸ್ ಕನ್ನನ್ಥಾನಮ್ ಅವರು ಭಾರತಕ್ಕೆ ಆಗಮಿಸುವ ವಿದೇಶಿಗರಿಗೆ ತಮ್ಮ ಸ್ವಂತ ದೇಶದಲ್ಲಿ ಬೀಫ್ ತಿಂದು ಬಳಿಕ ಭಾರತಕ್ಕೆ ಆಗಮಿಸಿ ಎಂಬ ಸಲಹೆಯನ್ನು ನೀಡಿದ್ದಾರೆ.
ಭುವನೇಶ್ವರದಲ್ಲಿ ಇಂಡಿಯನ್ ಅಸೋಸಿಯೇಶನ್ ಆಫ್ ಟೂರ್ ಆಪರೇಟರ್ಸ್ನ 33ನೇ ವಾರ್ಷಿಕ ಕನ್ವೆನ್ಷನ್ನಲ್ಲಿ ಅವರು ಭಾಗವಹಿಸಿದ್ದ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಬೀಫ್ ನಿರ್ಬಂಧದಿಂದಾಗಿ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರವಾಸೋದ್ಯಮಕ್ಕೆ ತೊಂದರೆಯಾಗಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ವಿದೇಶಿಗರು ತಮ್ಮ ಸ್ವಂತ ದೇಶದಲ್ಲಿ ಬೀಫ್ ತಿಂದು ಬಳಿಕ ಭಾರತಕ್ಕೆ ಆಗಮಿಸಬಹುದು’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.