ನವದೆಹಲಿ: ‘ಒನ್ ರ್ಯಾಂಕ್ ಒನ್ ಪೆನ್ಶನ್’ ಯೋಜನೆಯನ್ನು ಜಾರಿಗೊಳಿಸಲು ತೀವ್ರ ಒತ್ತಡಗಳು ಕೇಳಿ ಬರುತ್ತಿರುವಂತೆ, ಶನಿವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಮಾಜಿ ಸೈನಿಕರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದರು.
ನವದೆಹಲಿಯ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಸೈನಿಕರನ್ನು, ಹುತಾತ್ಮ ಯೋಧರ ವಿಧವೆಯರನ್ನು ಭೇಟಿಯಾಗಿ ಅವರು ಮಾತುಕತೆ ನಡೆಸಿದರು, ಯೋಜನೆ ಜಾರಿಗೊಳ್ಳಲು ವಿಳಂಬವಾಗುತ್ತಿರುವ ಬಗ್ಗೆ ಇವರೆಲ್ಲಾ ತಮ್ಮ ಅಸಮಾಧಾನವನ್ನು ತೋಡಿಕೊಂಡರು ಎನ್ನಲಾಗಿದೆ.
ನಿವೃತ್ತ ಸೈನಿಕರಿಗಾಗಿ ರೂಪಿಸಲಾದ ಈ ಯೋಜನೆಯನ್ನು ಜಾರಿಗೊಳಿಸುವ ಭರವಸೆ ನೀಡಿದ್ದ ಮೋದಿ ಇದೀಗ ತಮ್ಮ ಮಾತಿನಂತೆ ನಡೆಯುತ್ತಿಲ್ಲ, ಯುಪಿಎ ಸರ್ಕಾರ ಈ ಯೋಜನೆಗಾಗಿ 8,300 ಕೋಟಿ ರೂಪಾಯಿ ಬಜೆಟ್ನಲ್ಲಿ ಘೋಷಿಸಿತ್ತು ಆದರೆ ಎನ್ಡಿಎ ಉದ್ದೇಶಪೂರ್ವಕವಾಗಿ ಯೋಜನೆ ಜಾರಿಗೆ ವಿಳಂಬ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮೂಲಗಳ ಪ್ರಕಾರ ಈ ಯೋಜನೆಗಾಗಿ 9,300ಕೋಟಿ ರೂಪಾಯಿ ಅಗತ್ಯವಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.